ನಾಗಪುರದಲ್ಲಿ ಶೋಭಾ ಪಟಾಲಂ: ಯಡ್ಡಿ v/s ರೆಡ್ಡಿ
ಬೆಂಗಳೂರು,
ಸೆ.4: ಕೊಪ್ಪಳ ವಿಧಾನಸಭೆ ಉಪಚುನಾವಣೆ ನಿಮಿತ್ತ ರಾಜ್ಯದಲ್ಲಿ ರಾಜಕೀಯ ಸಮೀಕ್ಷೆಗಳು ಸಂಕೀರ್ಣಗೊಳ್ಳುತ್ತಿವೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇನ್ನೂ ರಾಜ್ಯ ರಾಜಕೀಯದಲ್ಲಿ ತಮ್ಮ ಹಿಡಿತ ಸಾಧಿಸಿದ್ದು, ಅವರ ನಾಯಕತ್ವದಲ್ಲೇ ಚುನಾವಣೆ ಎದುರಿಸಬೇಕೆಂಬುದು ಯಡ್ಡಿ ಬಣದ ಒತ್ತಾಸೆಯಾಗಿತ್ತು. id="toptextpromo">ಇದಕ್ಕೆ
ಈಗ ಮತ್ತಷ್ಟು ನೀರೆರೆದಿರುವುದು ಶ್ರೀರಾಮುಲು. ಪಕ್ಷ ತೊರೆಯುವುದಾಗಿ ಘೋಷಿಸಿರುವ ರೆಡ್ಡಿ ಸೋದರರಿಗೆ 'ಮೊದಲ ಚುಂಬನಂ ದಂತ ಭಗ್ನಂ' ಪಾಠ ಕಲಿಸಬೇಕೆಂದರೆ ಅದು ಯಡ್ಡಿಯಿಂದ ಮಾತ್ರ ಸಾಧ್ಯ ಎಂಬುದನ್ನು ಮನವರಿಕೆ ಮಾಡಿಕೊಡಲು ಯಡ್ಡಿ ಆಪ್ತರು ಸಜ್ಜಾಗಿದ್ದಾರೆ. ಹೀಗಾಗಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಮೇಲೆ ಒತ್ತಡ ಹೇರಲು ಆಪ್ತರ ದಂಡು ಈಗಾಗಲೇ ನಾಗಪುರಕ್ಕೆ ತೆರಳಿದೆ. id='are-slot-1' class='oiad oi-axt oiadv'> id='top-searched-articles'>ಸಚಿವರಾದ
ಶೋಭಾ ಕರಂದ್ಲಾಜೆ, ಬಸವರಾಜ ಬೊಮ್ಮಾಯಿ, ಸಿ.ಎಂ.ಉದಾಸಿ, ಲಕ್ಷ್ಮಣ ಸವದಿ ನಾಗ್ಪುರಕ್ಕೆ ತೆರಳಿರುವ ಪ್ರಮುಖರು. ಯಡಿಯೂರಪ್ಪ ಅವರ ನಾಯಕತ್ವದಲ್ಲೇ ಚುನಾವಣೆ ಎದುರಿಸಬೇಕೆಂದು ಈ ಮುಖಂಡರು ಗಡ್ಕರಿ ಅವರಿಗೆ ಮನವರಿಕೆ ಮಾಡಿಕೊಡಲಿದ್ದಾರೆ. ಇದಕ್ಕೂ ಮುನ್ನ ಯಡಿಯೂರಪ್ಪ ಮನೆಯಲ್ಲಿ ಸಭೆ ನಡೆಸಿ, ಗಡ್ಕರಿ ಅವರಿಗೆ ಮನವಿ ಸಲ್ಲಿಸುವ ಕುರಿತು ನಿರ್ಧರಿಸಿದ್ದರು.











Click it and Unblock the Notifications