ಕೊಪ್ಪಳ ಉಪಚುನಾವಣೆ: ಅಂತೂ ಇಂತೂ ಕಾಂಗ್ರೆಸ್ಸಿಗಿಲ್ಲ ಯೋಗ

'ಅವರವರೇ' ಗುದ್ದಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದ್ದು ಕಾಂಗ್ರೆಸ್ ಮೌನಪ್ರೇಕ್ಷಕನಾಗಿ ಉಳಿಯಲಿದೆ ಎಂಬುದು ರಾಜಕೀಯ ಪಂಡಿತರ ಅನಿಸಿಕೆ. ಆದರೂ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಸವರಾಜ ಹಿಟ್ನಾಳ ಅವರನ್ನು ಕೆಪಿಸಿಸಿ ಆಯ್ಕೆ ಮಾಡಿದೆ. ಇದು ಶ್ರೀರಾಮುಲು ಬಂಡಾಯ ಘೋಷಣೆಗೂ ಮುನ್ನ, ಶುಕ್ರವಾರ ನಡೆದಿರುವ ಆಯ್ಕೆ ಕಸರತ್ತು ಎಂಬುದು ಗಮನಾರ್ಹ.
ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಹಿಟ್ನಾಳ ಹೆಸರನ್ನು ಕೆಪಿಸಿಸಿ ಸರ್ವಾನುಮತದಿಂದ ಆಯ್ಕೆ ಮಾಡಿದೆ. ಸಾಧ್ಯವಾದಷ್ಟು ಶೀಘ್ರವಾಗಿ ಅಭ್ಯರ್ಥಿಯನ್ನು ಆಯ್ಕೆ ಮಾಡಿ, ಪ್ರಚಾರ ಕಾರ್ಯದಲ್ಲಿ ತೊಡಗಿಕೊಳ್ಳುವುದು ತಮ್ಮ ಇರಾದೆ. ಈ ಬಾರಿ ಕೊಪ್ಪಳದಲ್ಲಿ ಕಾಂಗ್ರೆಸ್ ಗೆಲುವು ಖಚಿತ ಎಂದೂ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಭಾರಿ ವಿಶ್ವಾಸ ವ್ಯಕ್ತಪಡಿಸಿದ್ದರು.
ಇದು ನಿಜವಾಗಿ 'ಇಬ್ಬರ ಜಗಳದಲ್ಲಿ ಮೂರನೆಯವನಿಗೆ ಲಾಭ' ಎಂದಾದರೆ ಬಿಜೆಪಿಗಿಂತ ಮುಖ್ಯವಾಗಿ ಶ್ರೀರಾಮುಲು ಗತಿಯೇನು?












Click it and Unblock the Notifications