ನಿಜವಾಗ್ಲೂ ಮೆಟ್ರೋ ಸೆ.15ಕ್ಕೆ ಓಡಿಸ್ತೀರಾ ಸಿಎಂ

ಮೊದಲು ಗೌರಿ ಗಣೇಶ ಟೈಮ್ ಗೆ ಓಡುತ್ತೆ ಅಂದಿದ್ರು ಈಗ ದೀಪಾವಳಿ ಅಥವಾ ಕನ್ನಡ ರಾಜ್ಯೋತ್ಸವ ವೇಳೆಗೆ ನಾಗರಿಕರು ಮೆಟ್ರೋ ರೈಲಿನಲ್ಲಿ ಪ್ರಥಮ ಪ್ರಯಾಣದ ಸುಖ ಅನುಭವಿಸುವ ನಿರೀಕ್ಷೆಯಿದೆ.
ಮೆಟ್ರೋ ರೈಲು ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸುವ ಮುನ್ನ ರೈಲ್ವೆ ಮಂಡಳಿ ಸುರಕ್ಷತೆ ಬಗ್ಗೆ ಸರ್ಟಿಫಿಕೇಟ್ ಕೊಡಬೇಕು. ಸೆ. 4 ರಂದು ರೈಲ್ವೆ ಮಂಡಳಿಯವರು ಮೆಟ್ರೋ ಬಗ್ಗೆ ಪರೀಕ್ಷೆ ನಡೆಸಲಿದ್ದಾರೆ. ಸುರಕ್ಷತಾ ಪ್ರಮಾಣ ಪತ್ರ ಸೆ.10ರೊಳಗೆ ಸಿಗಲಿದೆ ಎಂದು ಬಿಎಂಆರ್ ಸಿಎಲ್ ಅಧಿಕಾರಿಗಳು ಹೇಳುತ್ತಾರೆ.
ಸಿಎಂ ಜಾಲಿರೈಡ್ : ಬಿಎಂಆರ್ ಸಿಎಲ್ ಮೆಟ್ರೋ ಮೊದಲ ಹಂತದ ಕಾಮಗಾರಿ ಪರಿಶೀಲನೆ ನಡೆಸಿದ ಮುಖ್ಯಮಂತ್ರಿ ಸದಾನಂದ ಗೌಡರು, ಟ್ರೈನ್ ತುಂಬಾ ಓಡಾಡಿ ಸಂತೋಷ ಪಟ್ಟರು. ಅಕ್ಕಪಕ್ಕದಲ್ಲಿ ಸಚಿವ ಆರ್ ಅಶೋಕ್ ಹಾಗೂ ಶಾಸಕ ರಘು ಅವರನ್ನು ಕೂಡಿಸಿಕೊಂಡು ಡ್ರೈವರ್ ಸೀಟ್ ಹತ್ತಿದ ಸಿಎಂ, ಎಂಜಿ ರಸ್ತೆಯಿಂದ ಬೈಯಪ್ಪನಹಳ್ಳಿ ತನಕ ಸಂಚಾರ ಸುಖ ಅನುಭವಿಸಿದರು.
ರಾಜಕೀಯ ಮೆರವಣಿಗೆ: ಮುಖ್ಯಮಂತ್ರಿ ಸದಾನಂದ ಗೌಡರ ಮೆಟ್ರೋ ಮೊದಲ ಪಯಣಕ್ಕೆ ಸಾಥ್ ನೀಡಲು ಸಚಿವರು, ಶಾಸಕರ ಭಾರಿ ಸಂಖ್ಯೆಯಲ್ಲಿ ಆಗಮಿಸಿದ್ದರು. ಸಚಿವ ಆರ್.ಅಶೋಕ್, ಸುರೇಶ್‌ಕುಮಾರ್, ವಿ ಸೋಮಣ್ಣ, ಶಾಸಕ ಎಸ್.ಆರ್.ವಿಶ್ವನಾಥ್, ಎನ್. ಎ. ಹ್ಯಾರಿಸ್, ವಿಧಾನಪರಿಷತ್ ಸದಸ್ಯ ಅಶ್ವಥ್‌ನಾರಾಯಣ, ಶಾಸಕ ರಘು ಸೇರಿದಂತೆ ಅನೇಕರು ಸಿಎಂ ಒಟ್ಟಿಗೆ ಪಯಣಿಸಿದರು.












Click it and Unblock the Notifications