ತುರುವೇಕೆರೆ ತಾಲೂಕಿನಲ್ಲಿ ಚಿರತೆಗಳ ದಾಳಿಗೆ 11 ಕತ್ತೆ ಬಲಿ

cheetahs-kill-donkeys-tumkur-sasalu-village
ತುಮಕೂರು, ಆಗಸ್ಟ್ 31: ಮೊನ್ನೆಯಷ್ಟೇ ಚೀನಾದ ತೋಟವೊಂದರಲ್ಲಿ ನಾಯಿಗಳು ನುಗ್ಗಿದವೆಂದು ಮುದ್ದಾದ ಸಾವಿರಾರು ಮೊಲಗಳು ಭಯಭೀತಗೊಂಡ ಅಸುನೀಗಿದ್ದನ್ನು ಓದಿದ್ದೀರಿ. ಇದೀಗ ನಮ್ಮ ಆಜುಬಾಜಿನಲ್ಲೂ ಅಂತಹುದೇ ಘಟನೆ ನಡೆದಿದೆ. ಏನಪಾ ಅಂದರೆ, ಚಿರತೆಗಳ ಹಿಂಡೊಂದು ಕತ್ತೆಗಳ ಹಿಂಡಿನ ಮೇಲೆ ದಾಳಿ ಮಾಡಿ 11 ಕತ್ತೆಗಳ ರಕ್ತ ಹಿರಿ ಸಾಯಿಸಿವೆ.

ತುರುವೇಕೆರೆ ತಾಲೂಕು ಸಾಸಲು ಗ್ರಾಮದ ಬಸವರಾಜು ಎಂಬವರು ಸುಮಾರು 50ಕ್ಕೂ ಹೆಚ್ಚು ಕತ್ತೆಗಳನ್ನು ಸಾಕುತ್ತಿದ್ದು, ಇವರು ತಮ್ಮ ಕತ್ತೆಗಳನ್ನು ತಮ್ಮ ತೋಟದಲ್ಲಿ ರಾತ್ರಿ ಸಮಯದಲ್ಲಿ ಕಟ್ಟುತ್ತಿದ್ದರು. ಭಾನುವಾರ ರಾತ್ರಿ ದಾಳಿ ನಡೆಸಿರುವ ಚಿರತೆಗಳು 11 ಕತ್ತೆಗಳ ಕತ್ತು ಸೀಳಿ ರಕ್ತ ಕುಡಿದರೆ ಕೆಲವು ಕತ್ತೆಗಳ ಕಿವಿ, ಬೆನ್ನು ಕಚ್ಚಿ ಗಾಯಗೊಳಿಸಿವೆ.

ಚಿರತೆಯ ಹೆಜ್ಜೆ ಗುರುತು ಮತ್ತು ಕತ್ತೆಗಳ ಸಾವಿನ ಪ್ರಮಾಣ ನೋಡಿದರೆ ಒಂದು ಚಿರತೆ ಇಷ್ಟೊಂದು ಅನಾಹುತ ಮಾಡಲು ಸಾಧ್ಯವಿಲ್ಲ. ಹಾಗಾಗಿ ಚಿರತೆಗಳ ಹಿಂಡೇ ದಾಳಿ ನಡೆಸಿದೆ ಎಂದು ಕತ್ತೆಗಳ ಮಾಲಕ ಬಸವರಾಜು ತಿಳಿಸಿದ್ದಾರೆ. ಈ ಸಂಬಂಧ ದಂಡಿನ ಶಿವರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.

ಪದೇ ಪದೇ ಈ ಭಾಗದಲ್ಲಿ ಕುರಿ, ಕತ್ತೆಗಳ ಮೇಲೆ ಚಿರತೆ ದಾಳಿ ನಡೆಸುತ್ತಿದ್ದು ಅರಣ್ಯ ಇಲಾಖೆಯವರು ಸೂಕ್ತ ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದು, ಚಿರತೆ ದಾಳಿಗೆ ತುತ್ತಾಗಿರುವ ಕತ್ತೆಗಳ ಮಾಲಕನಿಗೆ ಸೂಕ್ತ ಪರಿಹಾರ ಒದಗಿಸುವಂತೆ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+