ಯಡಿಯೂರಪ್ಪಗೆ ಗಣೇಶನ ಹಬ್ಬ ಮಾವನ ಮನೆಯಲ್ಲಿ?

ಇದಕ್ಕೆ ಅವರ ಸ್ವಯಂಕೃತಾಪರಾಧವೇ ಕಾರಣ. ನನಗೆ ಜ್ವರ ಅದೂ ಇದು ಎಂದೆಲ್ಲ ಸಬೂಬು ಹೇಳಿಕೊಂಡು ಯಡಿಯೂರಪ್ಪ ಕೋರ್ಟ್ ಕಡೆಗೆ ಹೆಜ್ಜೆ ಹಾಕುತ್ತಿಲ್ಲ. ಕುತೂಹಲಕಾರಿ ಸಂಗತಿಯೆಂದರೆ ಹಳೆಯ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ ಕಡ್ಡಾಯ ಹಾಜರಾತಿಗೆ ಬೆಳಗಾವಿ ಕೋರ್ಟ್ ಸಹ ಆದೇಶಿಸಿದೆ.
ಮಾಜಿ ಮುಖ್ಯಮಂತ್ರಿ ಎರಡು ಸಮನ್ಸ್‌ಗೆ ಆಗಸ್ಟ್ 29ರಂದು ಖುದ್ದು ಲೋಕಾಯುಕ್ತ ಕೋರ್ಟ್‌ಗೆ ಹಾಜರಾಗಬೇಕು. ಮತ್ತೂಂದೆಡೆ, ಈ ಪ್ರಕರಣಗಳಲ್ಲಿ ಯಡಿಯೂರಪ್ಪ ಅವರಿಗೆ ನಿರೀಕ್ಷಣಾ ಜಾಮೀನು ನೀಡುವ ಬಗ್ಗೆಯೂ ಇಂದೇ ಹೈಕೋರ್ಟ್ ತೀರ್ಪು ಹೊರಬೀಳಲಿದೆ. ಹೀಗಾಗಿ, ಯಡಿಯೂರಪ್ಪ ಪಾಲಿಗೆ ಸೋಮವಾರ ಅಗ್ನಿ ಪರೀಕ್ಷೆ ದಿನ.
ಇದೀಗ ಬಂದ ವರ್ತಮಾನದ ಪ್ರಕಾರ ನ್ಯಾಯಾಲಯ ಯಡ್ಡಿ ಅವರ ಭೂಕಬಳಿಕೆ ಸಂಬಂಧದ ಎರಡು ವ್ಯಾಜ್ಯಗಳ ವಿಚಾರಣೆಯನ್ನು ಸೆ. 7 ಕ್ಕೆ ಮುಂದೂಡಿದೆ. ಹಾಗಾಗಿ ಅವರಿಗೆ ಗೌರಿ ಮತ್ತು ಗಣೇಶ ಹಬ್ಬದ ಹೋಳಿಗೆ ಮತ್ತು ಕುಚ್ಚ್ಚಿದ ಕಡುಬು ಪ್ರಸಾದ ಸಿಕ್ಕಂತಾಗಿದೆ.












Click it and Unblock the Notifications