ಬನ್ನೇರುಘಟ್ಟ ಪಾರ್ಕಿನಲ್ಲಿ 4 ಹುಲಿ ಮರಿಗಳ ಜನನ
ಬೆಂಗಳೂರು,
ಆಗಸ್ಟ್ 29: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ರೂಪಾ ಎಂಬ 10 ವರ್ಷದ ಹುಲಿ ನಾಲ್ಕು ಮರಿಗಳಿಗೆ ಶನಿವಾರ ರಾತ್ರಿ ಜನ್ಮ ನೀಡಿದ್ದು, ಈ ಮರಿಗಳ ಸೇರ್ಪಡೆಯೊಂದಿಗೆ ಅಲ್ಲಿರುವ ಮರಿಗಳ ಸಂಖ್ಯೆ ಒಟ್ಟು 12ಕ್ಕೆ ಏರಿದಂತಾಗಿದೆ. id="toptextpromo">ಇದು
ರೂಪಾಳ ಎರಡನೇ ಹೆರಿಗೆಯಾಗಿದ್ದು, ಮೊದಲ ಹೆರಿಗೆಯಲ್ಲಿ ಮರಿ ಬದುಕುಳಿದಿರಲಿಲ್ಲ. ಇದೀಗ ಮರಿ ಮತ್ತು ತಾಯಿ ಆರೋಗ್ಯವಾಗಿವೆ ಎಂದು ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕ ಡಾ ರಾಜು ಹೇಳಿದ್ದಾರೆ. ಇತ್ತೀಚೆಗೆ ಅಂದರೆ ಆಗಸ್ಟ್ 17ರಂದು ರಾಜೇಶ್ವರಿ ಎಂಬ ಹುಲಿಯು ಮರಿಯೊಂದಕ್ಕೆ ಜನ್ಮ ನೀಡಿದೆ. ರಜಿಯಾ ಎಂಬ ಮತ್ತೊಂದು ಬಿಳಿ ಹುಲಿಯು ಮಗುವಿನ ನಿರೀಕ್ಷೆಯಲ್ಲಿದೆ. id='are-slot-1' class='oiad oi-axt oiadv'> id='top-searched-articles'>ಇತ್ತೀಚೆಗಷ್ಟೇ
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಹುಲಿಯೂ ಸೇರಿದಂತೆ ಹಲವು ವನ್ಯಪ್ರಾಣಿಗಳು ಮೃತಪಟ್ಟಿದ್ದವು. ಇದೀಗ ಹೊಸ ಅತಿಥಿಗಳ ಆಗಮನದೊಂದಿಗೆ ಹೊಸ ಕಳೆ ಬಂದಿದೆ. ರಾಷ್ಟ್ರೀಯ ಉದ್ಯಾನ 'ಹುಲಿ ಮರಿಗಳ ನರ್ಸರಿ' ಆಗಿದೆ ಎಂದು ರಾಜು ಹರ್ಷ ವ್ಯಕ್ತಪಡಿಸಿದರು.











Click it and Unblock the Notifications