ಲೋಕಪಾಲ : ಕುಂದಾಪುರದ ವಿದ್ಯಾರ್ಥಿಗಳ ಸಹಿ ಅಭಿಯಾನ

Sign campaign by Kundapur students
ಕುಂದಾಪುರ, ಆ. 27 : ಅಣ್ಣಾ ಹಜಾರೆ ಪ್ರತಿಪಾದಿಸಿರುವ ಜನ ಲೋಕಪಾಲ ಮಸೂದೆಯ ಕುರಿತಂತೆ ಲೋಕಸಭೆಯಲ್ಲಿ ಚರ್ಚೆ ನಡೆಯುತ್ತಿದೆ. ಎಲ್ಲಾ ರಾಜ್ಯಗಳಲ್ಲಿ ಲೋಕಾಯುಕ್ತ ನೇಮಕವಾಗಬೇಕು, ಸರಕಾರಿ ಕಚೇರಿಗಳಲ್ಲಿ ನಾಗರಿಕ ಸನ್ನದು ಅನುಷ್ಠಾನಕ್ಕೆ ತರಬೇಕು ಮತ್ತು ಕೆಳಹಂತದ ಅಧಿಕಾರಿಗಳನ್ನೂ ಲೋಕಪಾಲ ವ್ಯಾಪ್ತಿಗೆ ತರಬೇಕು ಎಂದು ಪಟ್ಟು ಹಿಡಿದಿರುವ ಅಣ್ಣಾ ಹಜಾರೆ ಅವರ ಉಪವಾಸ 12ನೇ ದಿನಕ್ಕೆ ಕಾಲಿಟ್ಟಿದೆ.

ಅಣ್ಣಾ ಹೋರಾಟವನ್ನು ಬೆಂಬಲಿಸಿ ಕರ್ನಾಟಕದ ಹಳ್ಳಿಹಳ್ಳಿಗಳಲ್ಲಿಯೂ ಸತ್ಯಾಗ್ರಹ, ಅಭಿಯಾನ, ಪ್ರತಿಭಟನೆಗಳು ನಡೆಯುತ್ತಿವೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ತಗ್ಗರ್ಸೆಯ ಸ್ನೇಹ ತರಂಗ ಬೈಂದೂರು ವಿದ್ಯಾರ್ಥಿಗಳ ಸಂಘಟನೆ ಜನ ಲೋಕಪಾಲ ಮಸೂದೆಯನ್ನು ಮಂಡಿಸಬೇಕೆಂದು ಆಗ್ರಹಿಸಿ ಸಹಿ ಸಂಗ್ರಹಕ್ಕೆ ತೊಡಗಿದೆ.

ಕುಂದಾಪುರ ತಾಲೂಕಿನ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಸಹಿ ಅಭಿಯಾನದಲ್ಲಿ ಭಾಗಿಯಾಗಿ 2500 ಸಹಿಗಳನ್ನು ಸಂಗ್ರಹಿಸಿ ಕುಂದಾಪುರ ಪೊಲೀಸ್ ಕಮಿಷನರ್ ಅವರಿಗೆ ಮನವಿಯನ್ನು ಸಲ್ಲಿಸಿದ್ದಾರೆ. ಅವರ ಮುಖಾಂತರ ಕೇಂದ್ರ ಸರಕಾರದ ಮೇಲೆ ಜನ ಲೋಕಪಾಲ ಮಸೂದೆ ಮಂಡನೆಗೆ ಒತ್ತಡ ಹೇರಿದ್ದಾರೆ.

ಸಂಘಟನೆಯ ಅಧ್ಯಕ್ಷ ಸುನೀಲ್ ಎಚ್ ಜಿ, ಪ್ರವೀಣ್ ಟಿ, ಪ್ರವೀಣ್ ಶೆಟ್ಟಿ, ದಯಾನಂದ, ನಕ್ಷತ್ರ, ಚೇತನಕುಮಾರ್, ಜಯರಾಜ ಕಾಂಚನ್, ಪ್ರಭಾಕರ್, ರಾಘವೇಂದ್ರ, ನಾಗರಾಜ, ವಿನಯ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+