ಅಣ್ಣಾ ಪ್ರಾಣ ಜತೆ ಚೆಲ್ಲಾಟ 'ಬೇಡಿ ಅಕ್ಕಾ' - ಬಾಳ್ ಠಾಕ್ರೆ
ಮುಂಬಯಿ,
ಆಗಸ್ಟ್ 27: ಅಣ್ಣಾ ತಂಡದ ಕೆಲವು ಸದಸ್ಯರು ಸ್ವಹಿತಾಸಕ್ತಿಗಾಗಿ ಅವರ ಜೀವದ ಜತೆ ಆಟವಾಡುತ್ತಿದ್ದಾರೆ ಎಂದು ಆಪಾದಿಸಿದ ಶಿವಸೇನಾ ಪ್ರಮುಖ ಬಾಳ್ ಠಾಕ್ರೆ ಅವರು ಇದರ ಬದಲಿಗೆ ಅವರೇ ಉಪವಾಸ ಕುಳಿತುಕೊಳ್ಳಲಿ ಎಂದು ಹೇಳಿದ್ದಾರೆ. ಇದೇ ವೇಳೆ, ಜನ ಲೋಕಪಾಲ ಮಸೂದೆಗಾಗಿ ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ನಿಲ್ಲಿಸಲು ಹಜಾರೆಯಲ್ಲಿ ಠಾಕ್ರೆ ವಿನಂತಿಸಿದ್ದಾರೆ. id="toptextpromo">ಕಿರಣ್
ಬೇಡಿ ಮತ್ತು ಇತರರಿಗೆ ಸರಕಾರದೊಂದಿಗೆ ವೈಯಕ್ತಿಕ ದ್ವೇಷವಿದೆ. ಇದಕ್ಕಾಗಿ ಈ ಜನರು ಹಜಾರೆಯ ಜೀವದ ಜತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಪಕ್ಷದ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಠಾಕ್ರೆ ಕಿಡಿಕಾರಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಕಿರಣ್ ಬೇಡಿ ಬಹುಕಾಲವಿದ್ದರೂ ಆಕೆಯನ್ನು ಯಾವುದೇ ಸರ್ಕಾರ ದಿಲ್ಲಿ ಪೊಲೀಸ್ ಆಯುಕ್ತರನ್ನಾಗಿ ಮಾಡಿಲ್ಲ ಎಂದು ಸಂಪಾದಕೀಯದಲ್ಲಿ ತಿಳಿಸಲಾಗಿದೆ. id='are-slot-1' class='oiad oi-axt oiadv'> id='top-searched-articles'>ಅರವಿಂದ
ಕೇಜ್ರಿವಾಲ, ಕಿರಣ್ ಬೇಡಿ, ಮಾನಿಷ್ ಸಿಸೋಡಿಯಾ ಅವರು ಮುಂದಿನ 10-12 ದಿನ ಉಪವಾಸವಿರಲಿ. ಅವರ ದೇಹಗಳೂ ಉಪವಾಸದ ಬೇಗೆಯಲ್ಲಿ ಬೇಯಲಿ. ಈ ಜನರು ದಿನದಲ್ಲಿ ಎರಡು ಹೊತ್ತು ಊಟ ಮಾಡುತ್ತಾರೆ ಮತ್ತು ನಾಲ್ಕು ಹೊತ್ತು ತಿಂಡಿ ತಿನ್ನುತ್ತಾರೆ. ಆದರೂ ಭ್ರಷ್ಟಾಚಾರ ವಿರೋಧಿ ಚಳವಳಿಯನ್ನು ಮುಂದುವರಿಸುತ್ತಿದ್ದಾರೆ. ಇದು ಹಜಾರೆಗೆ ಮಾಡಿದ ನಂಬಿಕೆ ದ್ರೋಹವಾಗಿದೆ ಎಂದೂ ಶಿವಸೇನಾ ಮುಖ್ಯಸ್ಥ ಹೇಳಿದ್ದಾರೆ.











Click it and Unblock the Notifications