ಸದಾನಂದರೇ ನಿಮ್ಮನ್ನು ನೋಡಿ ಜನ ನಗುವಂತಾಗುವುದು ಬೇಡ!
ಲೋಕಾಯುಕ್ತ
ಡಿಐಜಿ ಪ್ರಣವ್ ಮೊಹಾಂತಿ ಅವರನ್ನು ದಿಢೀರನೆ ವರ್ಗಾವಣೆ ಮಾಡುವ ಮೂಲಕ ಸದಾನಂದಗೌಡರು ತಾವು ಯಡಿಯೂರಪ್ಪನವರ ಕೈಗೊಂಬೆಯಾಗಿ ಆಡಳಿತ ನಡೆಸುತ್ತಿರುವುದನ್ನು ಸಾಬೀತು ಪಡಿಸಿಕೊಂಡಂತಿದೆ. ಈ ಹಿಂದೆ ಹಲವಾರು ಮಂದಿ ಭ್ರಷ್ಟರಿಗೆ ಶಿಕ್ಷೆ ಆಗುವಂತೆ ನೋಡಿಕೊಂಡಿದ್ದ ಈ ಅಧಿಕಾರಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು ಸಾಮಾನ್ಯ ಸಂಗತಿಯೇನಲ್ಲ. id="toptextpromo">ಇಂತಹ
ಅಧಿಕಾರಿಯನ್ನು ಮುಂದುವರಿಯಲು ಎತ್ತಂಗಡಿ ಮಾಡಿರುವ ಹಿಂದೆ ಹಲವರ ಕೈವಾಡ ಇರಲೇ ಬೇಕು. ಭ್ರಷ್ಟಾಚಾರದ ವಿರುದ್ಧ ಮತ್ತು ಬಲಿಷ್ಠ ಲೋಕಪಾಲ ವ್ಯವಸ್ಥೆ ಜಾರಿಗೆ ಬರಬೇಕೆಂದು ದೇಶವ್ಯಾಪಿ ಹೋರಾಟ ನಡೆಯುತ್ತಿರುವಾಗ ಮತ್ತು ಇದಕ್ಕೆ ಬಿಜೆಪಿ ಬೆಂಬಲಿಸಿರುವಾಗ ಆ ಪಕ್ಷದ ಸರ್ಕಾರದ ಈ ಕ್ರಮ ನಾಚಿಕೆಗೇಡಿನದು. id='are-slot-1' class='oiad oi-axt oiadv'> id='top-searched-articles'>ಮುಖ್ಯಮಂತ್ರಿ
ಸದಾನಂದ ಗೌಡರು ಇಂತಹ ಕ್ರಮಕೈಗೊಳ್ಳುವ ಮೂಲಕ ಯಡಿಯೂರಪ್ಪನವರ ಕೈಗೊಂಬೆಯಾಗಿ ತಮ್ಮ ಹೆಸರಿಗೆ ಕಳಂಕ ತಂದುಕೊಳ್ಳಲಿದ್ದಾರೆ. ಹೀಗೇ ಮುಂದುವರಿದರೆ ಸದಾ ನಗುತ್ತಿರುವ ಸದಾನಂದಗೌಡರನ್ನು ನೋಡಿ ರಾಜ್ಯದ ಜನರೇ ನಗುವಂತಾಗುತ್ತದೆ.











Click it and Unblock the Notifications