ಕಟ್ಟಾ ಸುಬ್ರಮಣ್ಯಗೆ ಸಿಗಲಿಲ್ಲ ಬೈಲು, ಜೈಲೇ ಗತಿ
ಬೆಂಗಳೂರು,
ಆಗಸ್ಟ್ 23: ಕೈದಿ ನಂಬರ್ 7801 ಕಟ್ಟಾ ಸುಬ್ರಮಣ್ಯ ನಾಯ್ಡುಗೆ ಜೈಲೇ ಗಟ್ಟಿಯಾಗಿದೆ. ಕೆಐಎಡಿಬಿ ಭೂ ಹಗರಣದಲ್ಲಿ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಅವರ ಪುತ್ರ ಕಟ್ಟಾ ಜಗದೀಶ್ ಮತ್ತು ಇಟಾಸ್ಕ ನಿರ್ದೇಶಕ ಶ್ರೀನಿವಾಸ್ ಅವರುಗಳು ಸಲ್ಲಿಸಿದ್ದ ಜಾಮೀನು ಅರ್ಜಿ ತಿರಸ್ಕೃತಗೊಂಡಿದೆ. id="toptextpromo">ಕೆಐಎಡಿಬಿ
ಭೂ ಹಗರಣ ಪ್ರಕರಣದಲ್ಲಿ ಲೋಕಾಯುಕ್ತ ಪರ ವಕೀಲರು ಬಲವಾದ ವಾದ ಮಂಡಿಸಿರುವ ಹಿನ್ನೆಲೆಯಲ್ಲಿ ನ್ಯಾ. ವಿ. ಜಗನ್ನಾಥ್ ಹೈಕೋರ್ಟಿನಲ್ಲಿ ಕಟ್ಟಾ ಮನವಿಯನ್ನು ವಜಾಗೊಳಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಮುಖ್ಯವಾಗಿ,
ಆರೋಪಿಗಳು ಸಾಕ್ಷ್ಯ ನಾಶ ಪಡಿಸುವ ಸಾಧ್ಯತೆ ಹೆಚ್ಚಾಗಿರುವುದರಿಂದ ಜಾಮೀನು ನೀಡಲು ಸಾಧ್ಯವಿಲ್ಲ. ಜತೆಗೆ ಲೋಕಾಯುಕ್ತ ಪೊಲೀಸರು ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಬಲವಾದ ಸಾಕ್ಷ್ಯಗಳನ್ನು ಹೊಂದಿದ್ದಾರೆ ಎಂದು ತೀರ್ಪಿನಲ್ಲಿ ಹೇಳಿಲಾಗಿದೆ. ಇದರೊಂದಿಗೆ ಈ ಹಿಂದೆ ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾ. ಸುಧೀಂದ್ರರಾವ್ ಅವರು ಕಟ್ಟಾ ಬಳಗಕ್ಕೆ ಜಾಮೀನು ನೀಡದೆ, ಜೈಲಿಗೆ ಅಟ್ಟಿದ್ದನ್ನು ಪುರಸ್ಕರಿಸಿದಂತಾಗಿದೆ. ಅಲ್ಲಿಗೆ ಹಿರಿಯ ಕಟ್ಟಾ, ಕಿರಿಯ ಕಟ್ಟಾ ಮತ್ತು ಇಟಾಸ್ಕ ಎಂಡಿ ಶ್ರೀನಿವಾಸ್ ಅವರಿಗೆ ಸದ್ಯಕ್ಕೆ ಜೈಲು ವಾಸದಿಂದ ಮುಕ್ತಿ ಇಲ್ಲವಾಗಿದೆ.











Click it and Unblock the Notifications