ಪಡಿತರ ಚೀಟಿ: ಮಹಿಳೆಯ ಫೋಟೊ ಕ್ಲಿಕ್ಕಿಸಿ ಅನುಚಿತ ವರ್ತನೆ
ಕಾಸರಗೋಡು,
ಆಗಸ್ಟ್ 22: ಪಡಿತರ ಚೀಟಿಗಾಗಿ ಸಲ್ಲಿಸಿದ ಅರ್ಜಿಯ ಬಗ್ಗೆ ವಿಚಾರಿಸಲು ಬಂದ ಗೃಹಿಣಿಯೊಂದಿಗೆ ಅನುಚಿತವಾಗಿ ವರ್ತಿಸಿ, ಅವರ ಭಾವಚಿತ್ರವನ್ನು ಮೊಬೈಲ್‌ನಲ್ಲಿ ಕ್ಲಿಕ್ಕಿಸಿದ ಪ್ರಕರಣವೊಂದು ನಾಗರಿಕ ವಿತರಣಾ ಕಚೇರಿಯಲ್ಲಿ ನಡೆದಿದ್ದು, ಸಂಬಂಧಪಟ್ಟ ಇಬ್ಬರು ನೌಕರರನ್ನು ಅಮಾನತು ಗೊಳಿಸಲಾಗಿದೆ. id="toptextpromo">ರಾಜ್ಯ
ಆಹಾರ ಸಚಿವರ ಆದೇಶದಂತೆ ಅಮಾನತುಗೊಂಡವರನ್ನು ವಿತರಣಾ ಕಚೇರಿಯ ಕ್ಲರ್ಕ್ ಜಯಪ್ರಕಾಶ್ ಮತ್ತು ಶಶಿ ಎಂದು ಗುರುತಿಸಲಾಗಿದೆ. ನಾಯಮ್ಮಾರ್ಮೂಲೆಯ ಮಹಿಳೆಯೋರ್ವರು ಪಡಿತರ ಚೀಟಿಗೆ ಸಲ್ಲಿಸಿದ ಅರ್ಜಿಯ ವಿಚಾರಣೆಗೆಂದು ನಿನ್ನೆ ಕಚೇರಿಗೆ ಬಂದಿದ್ದರು. ಆಕೆ ಒಂದೂವರೆ ವರ್ಷದ ಹಿಂದೆ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದ್ದರೂ ಇದುವರೆಗೂ ಲಭಿಸಿರಲಿಲ್ಲ. id='are-slot-1' class='oiad oi-axt oiadv'> id='top-searched-articles'>ಈ
ಬಗ್ಗೆ ವಿಚಾರಿಸಿದ ವೇಳೆ ನೌಕರರು ಅನುಚಿತ ವರ್ತನೆಯೊಂದಿಗೆ ಮೊಬೈಲ್‌ನಲ್ಲಿ ಭಾವಚಿತ್ರ ತೆಗೆದಿದ್ದರೆನ್ನಲಾಗಿದೆ. ಇದನ್ನು ಪ್ರತಿಭಟಿಸಿದ ಮುಸ್ಲಿಮ್ ಯೂತ್ ಲೀಗ್ ಕಾರ್ಯಕರ್ತರು ನಾಗರಿಕ ವಿತರಣಾ ಕಚೇರಿಗೆ ಮುತ್ತಿಗೆ ಹಾಕಿದರು. ನೌಕರರ ಬಗ್ಗೆ ಯೂತ್‌ಲೀಗ್ ಜಿಲ್ಲಾ ಸಮಿತಿ, ನಗರಸಭಾ ಮಾಜಿ ಅಧ್ಯಕ್ಷೆ ಬೀಫಾತಿಮ್ಮ ಇಬ್ರಾಹೀಂ ಸಚಿವರಿಗೆ ನೀಡಿದ ದೂರಿನ ಮೇರೆಗೆ ಇಬ್ಬರು ನೌಕರರನ್ನೂ ಅಮಾನತುಗೊಳಿಸಲಾಗಿದೆ.











Click it and Unblock the Notifications