ಪಬ್ ಡಿಸ್ಕೋಥೆಕ್ ಮೇಲೆ ದಾಳಿ, 3 ಮಿಕಗಳು ಬಲೆಗೆ

ಹೈಗ್ರೌಂಡ್ಸ್ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ಬೆಬಲ್ಸ್ ಬಾರ್ ಲಾಂಜ್ ಅಕ್ರಮವಾಗಿ ಡಿಸ್ಕೋ ಥೆಕ್ ನಡೆಸುತ್ತಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ದಿಢೀರ್ ದಾಳಿ ನಡೆಸಿ, ಮೂವರನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನುಬೆನ್ಸ್‌ನ್‌ಟೌನ್‌ನ ಆಹೇಶ (51), ಆರ್‌ಟಿ ನಗರದ ನಿವಾಸಿ ಮಾಥ್ಯೂ (40) ಹಾಗೂ ಆರ್‌ಟಿ ನಗರದ ನಿವಾಸಿ ಜೋಸೆಫ್ (48) ಎಂದು ಗುರುತಿಸಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿ ರಾಜೇಶ್ ತಲೆಮರೆಸಿಕೊಂಡಿದ್ದಾನೆ. ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ. ಬೆಂಗಳೂರಿನಲ್ಲಿ ರಾತ್ರಿವೇಳೆ ನಡೆಯುವ ಮೋಜು ಮಸ್ತಿಗೆ ಕಡಿವಾಣ ಹಾಕಲು ಸಿಸಿಬಿ ಪೊಲೀಸರ ಅನಧಿಕೃತ ಅಡ್ಡಾಗಳ ಮೇಲೆ ನಿಗಾ ಇರಿಸಿದ್ದಾರೆ. ಸೂಕ್ತ ಸಮಯದಲ್ಲಿ ಕ್ರಮ ಕೈಗೊಳ್ಳುತ್ತಾರೆ ಎಂದು ಹೈಗ್ರೌಂಡ್ ಠಾಣಾಧಿಕಾರಿ ಹೇಳಿದ್ದಾರೆ.











Click it and Unblock the Notifications