ಉಡುಪಿಯಲ್ಲಿ ಚಿನ್ನಾಭರಣ ಮಳಿಗೆ ಮೇಲೆ ಗುಂಡಿನ ದಾಳಿ
ಮಂಗಳೂರು,
ಆ. 20 : ಉಡುಪಿಯಲ್ಲಿ ಶುಕ್ರವಾರ ರಾತ್ರಿ ಇಬ್ಬರು ಆಗಂತುಕರು ಚಿನ್ನಾಭರಣ ಮಳಿಗೆ ಮೇಲೆ ಗುಂಡು ಹಾರಿಸಿ ಪರಾರಿಯಾಗಿರುವ ಘಟನೆ ನಡೆದಿದೆ. ರಾತ್ರಿ 7.45ರ ಹೊತ್ತಿಗೆ ಇಬ್ಬರು ಅಪರಿಚಿತರು ಬೈಕಿನಲ್ಲಿ ಬಂದು ಯದ್ವಾತದ್ವಾ ಗುಂಡು ಹಾರಿಸಿ ಬೆಚ್ಚಿಬೀಳಿಸಿದ್ದಾರೆ. id="toptextpromo">ಐರೋಡಿ
ಜುವೆಲ್ಲರ್ಸ್ ಅಂಗಡಿ ಮೇಲೆ ಗುಂಡಿ ದಾಳಿ ಮಾಡಲಾಗಿದೆ. ಮಳಿಗೆಯಲ್ಲಿದ್ದ ನಾಲ್ಕು ಮಂದಿ ಕೆಲಸದವರು ಅಪಾಯದಿಂದ ಪಾರಾಗಿದ್ದಾರೆ. ಅಪರಿಚಿತರು ನಾಲ್ಕು ಸುತ್ತು ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಭೂಗತ
ಜಗತ್ತಿನವರ ಕೈವಾಡ ಇರಬಹುದೆಂಬ ಅನುಮಾನಗಳಿವೆ. ಹಫ್ತಾ ವಸೂಲಿ ಮಾಡುವ ತಂತ್ರವೇ ಎನ್ನುವ ಗುಮಾನಿಯೂ ಇದೆ. ಸ್ಥಳೀಯ ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಗುಂಡು ಹಾರಿಸಿ ಭೀತಿ ಉಂಟು ಮಾಡಿರುವ ಹಿಂದಿನ ಉದ್ದೇಶವೇನೆಂಬುದು ಬೆಳಕಿಗೆ ಬರಬೇಕಾಗಿದೆ.











Click it and Unblock the Notifications