ರಾಷ್ಟ್ರಧ್ವಜದ ಮೇಲೆ ಸಿಎಂ : ರಾಮ್‌ದಾಸ್ ಕ್ಷಮೆಯಾಚನೆ
ಮೈಸೂರು,
ಆ. 16 : ಮೈಸೂರಿನ ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಕರಪತ್ರದಲ್ಲಿ ರಾಷ್ಟ್ರಧ್ವಜದ ಮೇಲೆ ಸಿಎಂ ಸದಾನಂದರವರ ಚಿತ್ರವನ್ನು ಪ್ರಕಟಿಸಿದ ವಿಚಾರ ಅಸಮಾಧಾನಕ್ಕೆ ಕಾರಣವಾಗಿ ಕಾರ್ಯಕ್ರಮ ಗೊಂದಲದಲ್ಲಿ ನಡೆಯುವಂತಾಯಿತು. id="toptextpromo">ಸೋಮವಾರ
ಬೆಳಿಗ್ಗೆ ಧ್ವಜರೋಹಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮ್‌ದಾಸ್‌ರವರು ಧ್ವಜಾರೋಹಣ ನೆರವೇರಿಸಿದರು. ಇದೇ ವೇಳೆಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡವರಿಗೆ "ಸ್ವಾತಂತ್ರ್ಯೋತ್ಸವದ ಸಂದೇಶ" ಎಂಬ ಕರಪತ್ರವನ್ನು ಹಂಚಲಾಯಿತು. ಈ ಕರಪತ್ರದ ಮೇಲ್ಭಾಗದಲ್ಲಿ ಸಿಎಂ ಸದಾನಂದ ಗೌಡರ ಭಾವಚಿತ್ರವಿದ್ದರೆ, ಕೆಳಭಾಗದಲ್ಲಿ ರಾಷ್ಟ್ರಧ್ವಜವನ್ನು ಪ್ರಕಟಿಸಲಾಗಿತ್ತು. ಇದನ್ನು ನೋಡಿದ ಸಂಸದ ಎಚ್.ವಿಶ್ವನಾಥ್ ಅವರು ಅಸಮಾಧಾನಗೊಂಡರು. ಅಲ್ಲದೆ ಇದನ್ನು ವಿರೋಧಿಸಿ ಕರಪತ್ರವನ್ನು ಹರಿದು ಪ್ರತಿಭಟನೆಯನ್ನು ಕೂಡ ನಡೆಸಿದರು. ಇದಕ್ಕೆ ಕೆಲವು ಕಾಂಗ್ರೆಸ್ಸಿಗರು ಸಾಥ್ ನೀಡಿದರು. id='are-slot-1' class='oiad oi-axt oiadv'> id='top-searched-articles'>ಈ
ಬಗ್ಗೆ ಜಿಲ್ಲಾಧಿಕಾರಿ ಪಿ.ಆರ್.ವಸ್ತ್ರದ್ ಅವರನ್ನು ವಿಚಾರಿಸಿದಾಗ ಈ ಬಗ್ಗೆ ನಮಗೆ ಗೊತ್ತಿಲ್ಲ. ಜಿಲ್ಲಾಡಳಿತದಿಂದ ಕರಪತ್ರವನ್ನು ಮುದ್ರಿಸಿಲ್ಲ ನಮಗೂ ಇದಕ್ಕೂ ಸಂಬಂಧವಿಲ್ಲ ಎಂದು ಹೇಳಿ ನುಣುಚಿಕೊಂಡರು. ಈ ಪ್ರಕರಣ ಇನ್ನಷ್ಟು ತೀವ್ರಗೊಳ್ಳುವ ಸೂಚನೆಯನ್ನು ಅರಿತ ಉಸ್ತುವಾರಿ ಸಚಿವ ಎಸ್.ಎ.ರಾಮ್‌ದಾಸ್ ಅವರು ಕರಪತ್ರವನ್ನು ನಮ್ಮ ಕಛೇರಿಯಿಂದಲೇ ಪ್ರಕಟಿಸಿರುವುದಾಗಿಯೂ ಅದರಲ್ಲಿ ಸಿಎಂರವರ ಚಿತ್ರವನ್ನು ರಾಷ್ಟ್ರಧ್ವಜದ ಮೇಲೆ ಪ್ರಕಟಿಸಿರುವುದಕ್ಕೆ ಕ್ಷಮೆಯಾಚಿಸುವ ಮೂಲಕ ಪ್ರಕರಣಕ್ಕೆ ತೆರೆ ಎಳೆದರು.











Click it and Unblock the Notifications