ಅಣ್ಣಾ ಸ್ವಾತಂತ್ರ್ಯ ಹರಣ ಖಂಡಿಸಿ ಫ್ರೀಡಂ ಪಾರ್ಕಿನತ್ತ ಹೆಜ್ಜೆ

ನಾಡಿನ ಬುದ್ದಿಜೀವಿಗಳು, ಕಲಾವಿದರು, ಚಿಂತಕರು, ಹೋರಾಟಗಾರರು ಫ್ರೀಡಂ ಪಾರ್ಕಿನಲ್ಲಿ ಮಂಗಳವಾರ 11 ಗಂಟೆಯಿಂದ ಬುಧವಾರ 11 ಗಂಟೆವರೆಗೆ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಲಿದ್ದಾರೆ.
ನ್ಯಾ. ಸಂತೋಷ ಹೆಗ್ಡೆ ಅವರು ಫ್ರೀಡಂ ಪಾರ್ಕಿನ ಈಗಾಗಲೇ ಸಭೆ ನಡೆಸಿದ್ದಾರೆ. ಕಾನೂನು ಚೌಕಟ್ಟಿನಲ್ಲೇ ಅಣ್ಣಾ ಉಪಚಾಸ ಸತ್ಯಾಗ್ರಹ ನಡೆಸಿದ್ದರು. ಆದರೆ ಪೊಲೀಸರು ಅತಿರೇಕದ ಕ್ರಮ ಕೈಗೊಂಡಿದ್ದಾರೆ. ಪ್ರಬಲ ಲೋಕ ಮಸೂದೆ ಮಂಡನೆಗೆ ಕೇಂದ್ರ ಸರಕಾರ ಹಿಂದೇಟು ಹಾಕಿದೆ. ಅಣ್ಣಾ, ಕಿರಣ್ ಬೇಡಿ, ಅರವಿಂದ್ ಕೇಜ್ರಿವಾಲ ಮುಂತಾದ ಹೋರಾಟಗಾರರನ್ನು ಬಂಧಿಸುವ ಮೂಲಕ ಭ್ರಷ್ಟಾಚಾರ ವಿರೋಧಿ ಹೋರಾಟನ್ನು ಹತ್ತಿಕ್ಕಲಾಗದು ಎಂದು ಅವರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ್ದಾರೆ.
ಜಯನಗರ ಭಾಗದಿಂದ ಅನೇಕ ಕಾಲೇಜುಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾರಿ ಮೆರವಣಿಗೆ ನಡೆಸಿದ್ದು, ಫ್ರೀಡಂ ಪಾರ್ಕಿನತ್ತ ಹೊರಟಿದ್ದಾರೆ. ರಾಜ್ಯದ ವಿವಿಧ ಭಾಗಗಳಲ್ಲೂ ನಿರಶನ ಆರಂಭವಾಗಿದೆ.












Click it and Unblock the Notifications