ಬಿಜೆಪಿ ಬಿಕ್ಕಟ್ಟು ಶಮನಕ್ಕೆ ನಾನು ಬಂದಿಲ್ಲ; ಧರ್ಮೇಂದ್ರ ಪ್ರಧಾನ್

ರಾಜ್ಯದಲ್ಲಿನ ಆಡಳಿತಾರೂಢ ಬಿಜೆಪಿಯಲ್ಲಿನ ರಾಜಕೀಯ ಬಿಕ್ಕಟ್ಟು, ದಿನದಿನಕ್ಕೂ ಬದಲಾಗುತ್ತಿರುವ ನಾಟಕೀಯ ಬೆಳವಣಿಗೆ ರಾಜ್ಯದ ಜನತೆಯಲ್ಲಿ ಅಸಹ್ಯ ಹುಟ್ಟಿಸುವುದರೊಂದಿಗೆ ದೇಶದೆಲ್ಲೆಡೆ ಚರ್ಚಿಸಲ್ಪಡುವಂತಾಗಿದೆ. ಕರ್ನಾಟಕದ ಭ್ರಷ್ಟಾಚಾರದಲ್ಲಿನ ನಂ.1 ಪಟ್ಟಕ್ಕೆ ಸಾಲುಸಾಲು ಸಾಕ್ಷಿಗಳು ಸಿಗತೊಡಗಿವೆ.
ರಾಜ್ಯದಲ್ಲಿ ಬಿಜೆಪಿಯಲ್ಲಿನ ಎರಡು ಬಣಗಳು, ಸಚಿವ ಸ್ಥಾನಕ್ಕಾಗಿ ಕಚ್ಚಾಟ, ರೆಡ್ಡಿಗಳಾಡುತ್ತಿರುವ ಕಬಡ್ಡಿ, ಬದಲಾಗುತ್ತಿರುವ ಭಿನ್ನಾಭಿಪ್ರಾಯಗಳ ಈ ಸಂದರ್ಭದಲ್ಲಿ ಕೇಂದ್ರದಿಂದ ಯಾರೇ ಬಂದರೂ ಅದು ಸಾಕಷ್ಟು ಊಹಾಪೋಹಗಳಿಗೆ ಕಾರಣವಾಗುತ್ತವೆ. ಈಗ ಆಗಿರುವುದೂ ಅದೇ.
ನಾಳೆ ನಡೆಯಲಿರುವ ಕಾರ್ಯಕ್ರಮಕ್ಕೆ ಬಂದಿರುವ ಧರ್ಮೇಂದ್ರ ಪ್ರಧಾನ್ ಸಿಕ್ಕ ಸಿಕ್ಕವರಿಗೆ ಆಹಾರವಾಗುತ್ತಿರುವ ಈ ಸಂದರ್ಭದಲ್ಲಿ ಅವರು ಮೇಲಿನಂತೆ ಪದೇ ಪದೇ ಹೇಳಬೇಕಾಗಿರುವುದು ವಿಷಾದನೀಯವಾದರೂ ಅನಿವಾರ್ಯ ಎನ್ನಲೇಬೇಕಾಗಿದೆ.












Click it and Unblock the Notifications