ಮನಮೋಹನ 'ಸಿಂಗಂ' ಅಣಕ ಕಾಂಗ್ರೆಸ್ ಸಿಡಿಮಿಡಿ

ಬಹುಶಃ ಚಿತ್ರಕ್ಕೆ ಪರೋಕ್ಷವಾಗಿ ಪ್ರಚಾರ ನೀಡಿ ಚಿತ್ರದ ಯಶಸ್ಸಿಗೆ ಕಾರಣವಾಗಿದ್ದೆ ಈ ಯೂಟ್ಯೂಬ್ ನಲ್ಲಿರುವ ವಿಡಿಯೋ ಟ್ರೈಲರ್ ಎನ್ನಲಾಗಿದೆ. ಅಜಯ್ ದೇವಗನ್ ಮುಂಡ, ಮನಮೋಹನ್ ರುಂಡ ವಿರುವ ಈ ಸಿಂಗಂ ಚಿತ್ರದ ವಿಡಿಯೋ ಫೇಸ್ ಬುಕ್ ನಲ್ಲಿ ಕಂಡಿದ್ದೇ ತಡ ಭೋಪಾಲದ ಕಾಂಗ್ರೆಸ್ ವಕ್ತಾರ ಪಂಕಜ್ ಚತುರ್ವೇದಿ ಸಿಡಿಮಿಡಿಕೊಂಡಿದ್ದಾನೆ.
ಕಾಂಗ್ರೆಸ್ ನಾಯಕರು ಅದರಲ್ಲೂ ಗಾಂಧಿ ಫ್ಯಾಮಿಲಿ ಹೆಸರು ಕೆಡಿಸಲು ವಿಪಕ್ಷಗಳು ತಂತ್ರಜ್ಞಾನ ಬಳಸಿ ಈ ರೀತಿ ದಾಳಿ ಮಾಡುತ್ತಿದ್ದಾರೆ. ಪ್ರಧಾನಿ, ಸೋನಿಯಾ ಅವರಂಥ ನಾಯಕರ ಬಗ್ಗೆ ಅಣಕವಾಡುವುದು ದೇಶಕ್ಕೆ ಶೋಭೆ ತರುವುದಿಲ್ಲ. ತಕ್ಷಣವೇ ಈ ವಿಡಿಯೋ ತಯಾರಿಸಿದವರನ್ನು ಬಂಧಿಸಬೇಕು ಎಂದು ಮಧ್ಯಪ್ರದೇಶದ ಸೈಬರ್ ಸೆಲ್ ಪೊಲೀಸರಿಗೆ ದೂರಿತ್ತಿದ್ದಾರೆ.
ಆಶ್ಚರ್ಯವೆಂದರೆ ಬಿಜೆಪಿ ನಾಯಕರ ನಕಲಿ ಖಾತೆಗಳಾಗಲಿ, ಅಣಕು ವಿಡಿಯೋಗಳಾಗಲಿ ಅಷ್ಟಾಗಿ ಕಂಡು ಬಂದಿಲ್ಲ. ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ, ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ಸಿಗರ ನಕಲಿ ಫೇಸ್ ಬುಕ್ ಖಾತೆಗಳು ಅಸಲಿ ಖಾತೆಗಿಂತ ಜನಪ್ರಿಯತೆ ಗಳಿಸಿರುವುದು ಸುಳ್ಳಲ್ಲ.
ದೂರಿನ ಪ್ರತಿಯನ್ನು ಕ್ಯಾಲಿಫೋರ್ನಿಯಾದ ಫೇಸ್ ಬುಕ್ ಆಫೀಸ್ ಗೆ ಫ್ಯಾಕ್ಸ್ ಮಾಡಿರುವ ಮಧ್ಯಪ್ರದೇಶ ಪೊಲೀಸರು ಕಾಲು ಚಾಚಿಕೊಂಡು ವಿಡಿಯೋ ನೋಡುತ್ತಾ ಅನಂದಿಸುತ್ತಿದ್ದಾರೆ.












Click it and Unblock the Notifications