ಅಪ್ಪ ಖೈದಿ ನಂ. 7801, ಮಗ ಖೈದಿ ನಂ. 7802

ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಎದೆಯ ಮೇಲೆ 7801, ಅವರ ಪುತ್ರ ಜಗದೀಶನ ಮೇಲೆ 7802 ಹಾಗೂ ಇಟಾಸ್ಕಾ ಕಂಪನಿಯ ಎಂಡಿ ಶ್ರೀನಿವಾಸನ ಎದೆಯ ಮೇಲೆ 7803 ಖೈದಿ ನಂಬರ್ ಗಳು ರಾರಾಜಿಸುತ್ತಿವೆ.
ಇನ್ನು, ಸೋಮವಾರ ಬೆಳಗ್ಗೆ ತಿಂಡಿಯನ್ನಷ್ಟೇ ತಿಂದು ಆನಂತರ ದಿನವಿಡೀ ಒಂದು ತುತ್ತೂ ತಿನ್ನದೆ ತೊಳಲಾಡುತ್ತಿದ್ದ ಕಟ್ಟಾ ಗ್ಯಾಂಗ್ ಇಂದು ಬೆಳಗ್ಗೆ ಜೈಲಿನ ಚಿತ್ರಾನ್ನ ತಿಂದು ವ್ಯಾಕ್ ಎಂದಿದೆ. ತಕ್ಷಣ, ಮನೆಯಿಂದ ಊಟ ತರಿಸಿಕೊಡಿ ಎಂದು ಜೈಲು ಅಧಿಕಾರಿಗೆ ಮೊರೆಯಿಟ್ಟಿದ್ದಾರೆ. ಈ ಮಧ್ಯೆ, ಈ ಮೂರೂ ಖೈದಿಗಳಿಗೆ ಜೈಲು ಸಮವಸ್ತ್ರ (ಅದೇ, ಬಿಳಿ ಬಟ್ಟೆ!) ನೀಡಲಾಗಿದೆಯೇ, ಇಲ್ಲವೇ ಎಂಬುದು ಇನ್ನೂ ಬಹಿರಂಗವಾಗಿಲ್ಲ.
ಹಾಗೆಯೇ ಚಿಂತೆಯನ್ನೇ ಹಾಸುಹೊದ್ದುಕೊಂಡಿದ್ದರಿಂದ ಈ ವಿಚಾರಣಾಧೀನ ಖೈದಿಗಳತ್ತ ಯಾಕೋ ನಿದ್ರೆಯೂ ಸುಳಿದಿರಲಿಲ್ಲ. ಅದಕ್ಕೆ ಮನೆಯಿಂದ ಚಾಪೆ, ದಿಂಬು, ಹೊದಿಕೆಯನ್ನೂ ತರಿಸಿಕೊಡಿ ಎಂದು ಕಟ್ಟಾ ದ್ವಯರು ಗೋಗರೆದಿದ್ದರು. ಅದರಂತೆ ಮನೆಯಿಂದ ಶುಭ್ರ ಹಾಸಿಗೆ ಬಟ್ಟೆಗಳನ್ನು ತರಿಸಿಕೊಡಲಾಗಿದೆ.












Click it and Unblock the Notifications