'ಲೋಕೋಪಯೋಗಿ' ಮೃತ್ಯುಂಜಯಸ್ವಾಮಿ ಸಸ್ಪೆಂಡ್
ಬೆಂಗಳೂರು,
ಆಗಸ್ಟ್, 5: ಲೋಕಾಯುಕ್ತ ದಾಳಿಗೆ ಈಡಾಗಿದ್ದ ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿ ಸಿ. ಮೃತ್ಯುಂಜಯಸ್ವಾಮಿ ಅವರನ್ನು ಅಮಾನತುಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಅಂದಹಾಗೆ, ಮೃತ್ಯುಂಜಯಸ್ವಾಮಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಪ್ತ ಪಟಾಲಂಗೆ ಸೇರಿದವರು. id="toptextpromo">ಬುಧವಾರ
ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಮೃತ್ಯುಂಜಯಸ್ವಾಮಿ ಗುರುವಾರ ಕಚೇರಿಗೆ ಹಾಜರಾಗಿದ್ದರು. ಈ ವಿಷಯ ಗೊತ್ತಾದ ಕೂಡಲೇ ಎಚ್ಚೆತ್ತ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಅಧಿಕಾರಿಗಳು ಬುಧವಾರದ ದಿನಾಂಕ ನಮೂದಿಸಿ ಅಮಾನತು ಆದೇಶ ಹೊರಡಿಸಿದರು ಎಂದು ಮೂಲಗಳು ತಿಳಿಸಿವೆ. id='are-slot-1' class='oiad oi-axt oiadv'> id='top-searched-articles'>ಕಾನೂನು
ಪ್ರಕಾರ 48 ಗಂಟೆಗಿಂತ ಹೆಚ್ಚು ಕಾಲ ನ್ಯಾಯಾಂಗ ಬಂಧನದಲ್ಲಿ ಇದ್ದವರನ್ನು ಅಮಾನತು ಮಾಡಬೇಕಾಗುತ್ತದೆ. ಆದರೆ ಇವರ ಬಂಧನವಾಗಿ ಒಂದು ವಾರ ಆಗಿದ್ದರೂ ಅಮಾನತು ಆಗಿರಲಿಲ್ಲ. ಈಗ ಜುಲೈ 22ರಿಂದಲೇ ಜಾರಿಯಾಗುವಂತೆ ಅಮಾನತುಗೊಳಿಸಲಾಗಿದೆ. ವಿಚಾರಣೆ ಕಾಯ್ದಿರಿಸಿ ಅಮಾನತು ಆದೇಶ ಹೊರಡಿಸಲಾಗಿದ್ದು, ಅಮಾನತು ಅವಧಿಯಲ್ಲಿ ಕೇಂದ್ರಸ್ಥಾನ ಬಿಟ್ಟು ಅವರು ಬೇರೆ ಕಡೆ ಹೋಗುವಂತಿಲ್ಲ.











Click it and Unblock the Notifications