ಒಂಬತ್ತೂವರೆ ವರ್ಷದ ಬಳಿಕ ತೆಲಗಿಗೆ ಜೈಲಿಂದ ಬಿಡುಗಡೆ
ಬೆಂಗಳೂರು,
ಆ.4: ಒಂಬತ್ತೂವರೆ ವರ್ಷದ ಬಳಿಕ ಛಾಪಾ ಕಾಗದ ಹಗರಣದ ರೂವಾರಿ ಕರೀಂ ಲಾಲಾ ತೆಲಗಿಗೆ ಜೈಲಿಂದ ಬಿಡುಗಡೆ ಭಾಗ್ಯ ಲಭಿಸಿದೆ. ದೇಶದಾದ್ಯಂತೆ ಮುಕ್ತವಾಗಿ ಓಡಾಡಲು ಕರ್ನಾಟಕ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ. id="toptextpromo">ಅನಾರೋಗ್ಯದಿಂದ
ಬಳಲುತ್ತಿರುವ ತೆಲಗಿ ಚಿಕಿತ್ಸೆ ಪಡೆಯಲು ಹಾಗೂ ಮಗಳ ಮದುವೆಗೆ ಅನುವಾಗುವಂತೆ ನ್ಯಾಯಮೂರ್ತಿ ವಿ ಜಗನ್ನಾಥ್ ಅವರು ಷರತ್ತುಬದ್ಧ ಜಾಮೀನನ್ನು ಮಂಜೂರು ಮಾಡಿದ್ದಾರೆ. ಗುರುವಾರ (ಆ.4) ತೆಲಗಿ ಬಿಡುಗಡೆಯಾಗುತ್ತಿದ್ದಾನೆ. id='are-slot-1' class='oiad oi-axt oiadv'> id='top-searched-articles'>ತೆಲಗಿ
ಮೇಲೆ ಒಟ್ಟು ಒಂಬತ್ತು ಪ್ರಕರಣಗಳು ದಾಖಲಾಗಿದ್ದು, ಮೂರು ಪ್ರಕರಣಗಳಿಗೆ ಸಂಬಂಧಿಸಿದಂತೆ 10 ವರ್ಷ ಜೈಲು ಶಿಕ್ಷೆಯಾಗಿತ್ತು. ಆರು ಪ್ರಕರಣಗಳ ವಿಚಾರಣೆ ನಡೆಯುತ್ತಿದೆ. ತೆಲಗಿ ಹಲವಾರು ಮಾರಕ ಕಾಯಿಲೆಗಳಿಂದ ಬಳಲುತ್ತಿದ್ದು ಬದುಕುಳಿಯುವುದು ಇನ್ನು ಕೆಲವೆ ದಿನ ಎಂದು ವೈದ್ಯರು ಪ್ರಮಾಣ ಪತ್ರವನ್ನೂ ಕೊಟ್ಟಿದ್ದಾರೆ.











Click it and Unblock the Notifications