ಭಾರತ ದೇಶ ತಿಪ್ಪೆಗುಂಡಿ ಎಂದ ರೇಡಿಯೋ ಜಾಕಿ

ರೇಡಿಯೋ ನಿರೂಪಕ ಕೈಲ್ ಸ್ಯಾಂಡಿಲ್ಯಾಂಡ್‌ನ ಈ ಹೇಳಿಕೆ ವಿರುದ್ಧ ಆಸ್ಟ್ರೇಲಿಯಾದ ಭಾರತಯ ಸಮುದಾಯ ಆಕ್ರೋಶ ವ್ಯಕ್ತಪಡಿಸಿದೆ. ತಕ್ಷಣವೇ ಸ್ಯಾಂಡಿಲ್ಯಾಂಡ್ ಕ್ಷಮೆ ಯಾಚಿಸಬೇಕು ಎಂದು ಸಿಡ್ನಿ ಮೂಲದ ಸಂಘಟನೆ ಆಗ್ರಹಿಸಿದೆ.
'ಕ್ಯಾಲ್ ಅಂಡ್ ಜಾಕಿ ಒ' ಎಂಬ ಕಾರ್ಯಕ್ರಮದಲ್ಲಿ ಹಿಂದುಗಳ ಪವಿತ್ರ ನದಿಯನ್ನು ಟೀಕಿಸಿದ್ದಷ್ಟೇ ಅಲ್ಲದೆ, ಹಿಂದೂ ಧರ್ಮದ ಅನುಯಾಯಿಗಳ ಬಗ್ಗೆ ಕೈಲ್ ಲೇವಡಿ ಮಾಡಿದ್ದಾನೆ ಎಂದು ಮಂಡಳಿಯ ಅಧ್ಯಕ್ಷ ಯಾದು ಸಿಂಗ್ ತಿಳಿಸಿದ್ದಾರೆ.
ಭಾರತೀಯ ಸಮುದಾಯದ ಕ್ಷಮೆಯಾಚಿಸಬೇಕು ಇಲ್ಲದಿದ್ದರೆ ಆಸ್ಟ್ರೇಲಿಯಾದ ಮಾಧ್ಯಮ ನಿಯಂತ್ರಣ ಪ್ರಾಧಿಕಾರಕ್ಕೆ ಪತ್ರ ಬರೆದು ರೇಡಿಯೋ ಲೈಸನ್ಸ್ ರದ್ದು ಪಡಿಸಲು ಆಗ್ರಹಿಸುವುದಾಗಿ ಕೌನ್ಸಿಲ್ ಆಫ್ ಇಂಡಿಯನ್ ಆಸ್ಟ್ರೇಲಿಯನ್ಸ್(ಸಿಐಎ) ಹೇಳಿದೆ.












Click it and Unblock the Notifications