ಸಿಕ್ಸ್ ಮಂತ್ಸಲ್ಲಿ ಮತ್ತೆ ಬರ್ತೀನ್ರಿ : ಯಡಿಯೂರಪ್ಪ ಸಿಕ್ಸರ್!

I will come back in six months, Yeddyurappa announces
ಬೆಂಗಳೂರು, ಆ. 2 : "ಸಿಕ್ಸ್ ಮಂತ್ಸಲ್ಲಿ ಮತ್ತೆ ಬರ್ತೀನ್ರಿ", "ವಿ ಆರ್ ಆಲ್ಸೋ ಎಕ್ಸ್ ಪೆಕ್ಟಿಂಗ್ ದ ಸೇಮ್", "ಯು ಆರ್ ವೆಲ್ಕಮ್" ಎಂಬ ಮಾತುಗಳು ಅಧಿಕಾರಿಗಳಿಗಾಗಿ ಇಂದು ಸಂಜೆ ಹಂಗಾಮಿ ಮುಖ್ಯಮಂತ್ರಿ ಏರ್ಪಡಿಸಲಾಗಿದ್ದ ಚಹಾಕೂಟದಲ್ಲಿ ಕೇಳಿಬಂದ ಮಾತುಗಳು.

ಮೊದಲ ಮಾತನ್ನು ಮುಖ್ಯಮಂತ್ರಿ ಪಟ್ಟದಿಂದ ಬಲವಂತವಾಗಿ ಕೆಳಗಿಳಿಸಲ್ಪಟ್ಟಿರುವ ಬಿಎಸ್ ಯಡಿಯೂರಪ್ಪ ಹೇಳಿದ್ದರೆ, ಉಳಿದೆರಡು ಮಾತುಗಳನ್ನು ಅವರ ಸುತ್ತಲೂ ನೆರೆದಿದ್ದ ಸೂಟು ಬೂಟಿನ ಟಿಪ್ ಟಾಪ್ ಅಧಿಕಾರಿಗಳು ಆಡಿದ್ದಾರೆ. ಅವರ ಈ ಮಾತಿನ ಮರ್ಮವಾದರೂ ಏನು?

ಏನ್ರೀ ಮಾತಿನ ಅರ್ಥ? : ಎಂಥ ದೂರಾಲೋಚನೆ ಇಟ್ಟುಕೊಂಡು ಈ ಮಾತುಗಳನ್ನು ಯಡಿಯೂರಪ್ಪ ಆಡಿದ್ದಾರೆ? ಯಾರೇ ಮುಖ್ಯಮಂತ್ರಿಯಾದರೂ ಅವರನ್ನು ಹೆಚ್ಚುಕಾಲ ಅಧಿಕಾರದಲ್ಲಿ ಉಳಿಸುವುದಿಲ್ಲ ಅಂತಲೊ? ಅಥವಾ ಹೊಸ ಪಕ್ಷ ಸ್ಥಾಪಿಸಿ ಇತರ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡು ಮತ್ತೆ ಅಧಿಕಾರವೇರುವ ಹುನ್ನಾರವೊ?

ಯಡಿಯೂರಪ್ಪ ನಂತರ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿರುವ ಹೊತ್ತಿನಲ್ಲೇ ಇಂಥ ಮಾತುಗಳನ್ನು ಆಡಿ ವರಿಷ್ಠರಿಗೂ ದಿಗಿಲು ಮುಟ್ಟಿಸಿದ್ದಾರೆ. ಈ ಮಾತು ಅವರೇ ಬೆಂಬಲಿಸಿರುವ ಡಿವಿ ಸದಾನಂದ ಗೌಡ ಅವರ ಟ್ರೇಡ್ ಮಾರ್ಕ್ ನಗುವನ್ನು ಕಿತ್ತಿರಲೂ ಸಾಕು.

ಹೊಸ ಮುಖ್ಯಮಂತ್ರಿ ಆಯ್ಕೆ ನಾಳೆ : ತಾವು ಬೆಂಬಲಿಸಿರುವ ಅಭ್ಯರ್ಥಿಯೇ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ವಿಶ್ವಾಸವನ್ನು ಬಿಜೆಪಿಯ ಎರಡೂ ಬಣಗಳು ಹೊಂದಿವೆ. ಯಡಿಯೂರಪ್ಪನವರು ಬೆಂಗಳೂರಿನಲ್ಲಿಯೇ ಸಹಿ ಸಂಗ್ರಹಕ್ಕೆ ನಿಂತಿದ್ದರೆ, ಅನಂತ್ ಕುಮಾರ್ ಬಣ ದೆಹಲಿಗೇ ಹೋಗಿ ಲಾಬಿ ನಡೆಸುತ್ತಿದೆ.

ಯಾವುದೇ ಲಾಬಿಗೂ ಮಣಿಯುವುದಿಲ್ಲ. ಎಲ್ಲರೂ ಒಪ್ಪುವ ಸಹಮತದ ಅಭ್ಯರ್ಥಿಯೇ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಖಡಕ್ ಮಾತನ್ನು ಇಂದು ಬೆಂಗಳೂರಿಗೆ ಆಗಮಿಸುತ್ತಿರುವ ರಾಜನಾಥ್ ಸಿಂಗ್ ಮತ್ತು ಅರುಣ್ ಜೇಟ್ಲಿ ಆಡಿದ್ದಾರೆ. ಮುಂದಿನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬುದು ಸದ್ಯಕ್ಕೆ ಊಹಾತೀತ ಪ್ರಶ್ನೆಯಾಗಿಯೇ ಉಳಿದಿದೆ.

ಹೈಕೋರ್ಟ್ ಮೆಟ್ಟಲೇರಿದ ಯಡಿಯೂರಪ್ಪ : ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ನ್ಯಾ. ಸಂತೋಷ್ ಹೆಗ್ಡೆ ಅವರು ಸಲ್ಲಿಸಿರುವ ವರದಿಯನ್ನು ರದ್ದು ಮಾಡಬೇಕೆಂದು ಆಗ್ರಹಿಸಿ ಯಡಿಯೂರಪ್ಪ ಕರ್ನಾಟಕ ಹೈಕೋರ್ಟ್ ನಲ್ಲಿ ಅರ್ಜಿ ಗುಜರಾಯಿಸಿದ್ದಾರೆ.

ವರದಿಯಲ್ಲಿ ತಮ್ಮ ಹೆಸರನ್ನು ಪ್ರಸ್ತಾಪಿಸುವ ಮುನ್ನ ತಮ್ಮ ಹೇಳಿಕೆಯನ್ನು ಆಲಿಸಲು ಯಾವುದೇ ಅವಕಾಶವನ್ನು ಲೋಕಾಯುಕ್ತ ನೀಡಿಲ್ಲ ಎಂದು ಅವರು ಅರ್ಜಿಯಲ್ಲಿ ತಿಳಿಸಿದ್ದಾರೆ. ಅರ್ಜಿ ಆ.3ರಂದು ಹೈಕೋರ್ಟಿನಲ್ಲಿ ವಿಚಾರಣೆಗೆ ಬರಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+