ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಸಿ ಮುಟ್ಟಿಸಿದ ಯಡಿಯೂರಪ್ಪ; ಕೈಚೆಲ್ಲಿದ ಹೈಕಮಾಂಡ್

By Srinath
|
Google Oneindia Kannada News

yeddyurappa
ಬೆಂಗಳೂರು, ಜುಲೈ 29: ಮುಖ್ಯಮಂತ್ರಿ ಯಡಿಯೂರಪ್ಪ ನಿಜಕ್ಕೂ ಪಕ್ಷದ ವರಿಷ್ಠರನ್ನು ಅಸಹಾಯಕರನ್ನಾಗಿಸಿದ್ದಾರೆ. ಮಧ್ಯಾಹ್ನ ತಾವು ಹಾಕಿದ ಬಾಂಬ್ ಗೆ ವರಿಷ್ಠರನ್ನು ಬೆಚ್ಚಿಬೀಳಿಸಿದ್ದಾರೆ. ಹೊಸ ಲೈಫ್ ಜಾಕೆಟ್ ತೊಟ್ಟಿರುವ ಯಡಿಯೂರಪ್ಪಸದ್ಯದ ಮಟ್ಟಿಗೆ ಖಂಡಿತಾ ಮೇಲುಗೈ ಸಾಧಿಸಿದ್ದಾರೆ. ಇದರಿಂದ ರಾಜ್ಯ ಬಿಜೆಪಿಯಲ್ಲಿ ಬಿಕ್ಕಟ್ಟು ಉಲ್ಬಣಿಸಿದೆ.

ಈ ಮಧ್ಯೆ, ಬಹುತೇಕ ಶಾಸಕರು ಯಡಿಯೂರಪ್ಪ ಅವರಲ್ಲಿ ಅಚಲ ವಿಶ್ವಾ ವ್ಯಕ್ತಪಡಿಸಿದ್ದರಿಂದ ಶಾಸಕಾಗ ಪಕ್ಷದ ನಿಗದಿತ ಸಭೆಯೂ ನಡೆದಿಲ್ಲ. ವರಿಷ್ಠರಿಬ್ಬರೂ ರೇಸ್ ಕೋರ್ಸ್ ರಸ್ತೆಯಲ್ಲಿರುವ ಯಡಿಯೂರಪ್ಪ ಅವರ ನಿವಾಸಕ್ಕೆ ಧಾವಿಸಿ ಅಲ್ಲೂ ಮಾತುಕತೆ ನಡೆಸಿದರು. ಆದರೆ ವರಿಷ್ಠರಿಗೆ ಯಡಿಯೂರಪ್ಪ ಮಣೆ ಹಾಕದೇ ಬರಿಗೈಲಿ ಕಳಿಸಿದ್ದಾರೆ.

ಇಂದು 4 ಗಂಟೆಗೆ ಹೋಟೆಲ್ ಅಶೋಕಾದಲ್ಲಿ ಸಭೆ ಸೇರಿದ ವರಿಷ್ಠರಾದ ರಾಜನಾಥ್ ಸಿಂಗ್ ಯಡಿಯೂರಪ್ಪ ರಾಜೀನಾಮೆ ಕುರಿತು ಮತ್ತು ಹೊಸ ನಾಯಕನ ಆಯ್ಕೆ ಮಾಡಲು ಸಾಧ್ಯವಾಗದೆ ಸಭೆಯನ್ನು ಅಂತ್ಯಗೊಳಸಿದ್ದಾರೆ.

ಈ ಕುರಿತು ಸಭೆಯಲ್ಲಿ ಪಾಲ್ಗೊಂಡಿದ್ದ ಸಂಸದ ಸದಾನಂದ ಗೌಡ ಅವರು ಸುದ್ದಿಗಾರರಿಗೆ ಮಾಹಿತಿ ನೀಡಿದ್ದು, ಯಡಿಯೂರಪ್ಪ ಅವರು ಸ್ವತಃ ರಾಜಿನಾಮೆ ನೀಡುವವರೆಗೂ ಕಾದುನೋಡುವ ತಂತ್ರಕ್ಕೆ ಶರಣಾಗಿದ್ದಾರೆ. ಯಡಿಯೂರಪ್ಪ ರಾಜಿನಾಮೆ ನೀಡಿದ ನಂತರವೇ ಶಾಸಕಾಂಗ ಪಕ್ಷದ ಸಭೆ ನಡೆಸಿ, ಅದರಲ್ಲಿ ನೂತನ ನಾಯಕನನ್ನು ಆಯ್ಕೆ ಮಾಡುವುದಾಗಿ ಹೈಕಮಾಂಡ್ ಸ್ಪಷ್ಟಪಡಿಸಿದೆ.

ಈ ಮಧ್ಯೆ, ಯಡಿಯೂರಪ್ಪ ಅವರ ಮನವೊಲಿಕೆ ಯತ್ನ ನಡೆದಿದೆ. ಆದರೆ ಯಡಿಯೂರಪ್ಪ ತಮ್ಮ ಪಟ್ಟನ್ನು ಮತ್ತಷ್ಟು ಬಿಗಿಗೊಳಿಸಿದ್ದಾರೆ. ಶೋಬಾ ಕರಂದ್ಲಾಜೆ ತಮ್ಮ ಉತ್ತರಾಧಿಕಾರಿಯಾಗಬೇಕು. ತಾವು ಪಕ್ಷದ ರಾಜ್ಯಾಧ್ಯಕ್ಷರಾಗಬೇಕು. ನೂತನ ಸಚಿವರ ನೇಮಕ ಮಾಡುವಾಗ ನನ್ನನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂಬುದು ಯಡಿಯೂರಪ್ಪ ಅವರ ಪ್ರಮುಖ ಬೇಡಿಕೆ/ಷರತ್ತುಗಳಾಗಿವೆ.

English summary
Bjp High command headed by Rajnath Singh and Arun Jaitly which met in Hotel Ashoka at 4pm (July 29) could not come to a conclusion about the new leadership in Karnataka. Chief Minister B.S. Yeddyurappa sticks to his conditions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X