ಯಡಿಯೂರಪ್ಪ ನಂಬಿ ಮಠ ಸೇರಿದ ಸಚಿವ ಸೋಮಣ್ಣ

V Somanna
ತುಮಕೂರು, ಜು.28: ಅಕ್ರಮ ಗಣಿಗಾರಿಕೆ ಕುರಿತು ಲೋಕಾಯುಕ್ತ ವರದಿಯಲ್ಲಿ ನನ್ನ ಹೆಸರಿಲ್ಲ. ಲೋಕಾಯುಕ್ತರು ಏಕೆ ನನ್ನ ಹೆಸರು ಪ್ರಸ್ತಾಪಿಸಿದರು ಎಂದು ತಿಳಿಯುತ್ತಿಲ್ಲ. ನಾನು ಎಂದಿಗೂ ಅಕ್ರಮ ವ್ಯವಹಾರದಲ್ಲಿ ಭಾಗಿಯಾಗಿಲ್ಲ.

ಸುಮ್ಮನೆ ಆರೋಪಿಯಂತೆ ನನ್ನನ್ನು ಬಿಂಬಿಸಬೇಡಿ ಎಂದು ಖಾಸಗಿ ಟಿವಿ ಮಾಧ್ಯಮವನ್ನು ಸೋಮಣ್ಣ ಅವರು ತರಾಟೆಗೆ ತೆಗೆದುಕೊಂಡರು. ಬೆಂಗಳೂರು ತುಮಕೂರು ಸ್ಪೀಡ್ ರೈಲಿನಂತೆ ಸಾಗಿದ್ದ ವಸತಿ ಖಾತೆ ಸಚಿವ ಸೋಮಣ್ಣ ಅವರ ವಾಗ್ಬಾಣಕ್ಕೆ ಹೆದರಿದ ಟಿವಿ ನಿರೂಪಕ, ಕ್ಷಣ ಕಾಲ ತಬ್ಬಿಬ್ಬಾದ ಘಟನೆ ನಡೆಯಿತು.

ಯಡಿಯೂರಪ್ಪ ಅವರು 121 ಶಾಸಕರ ಬೆಂಬಲ ಹಾಗೂ ನಾಡಿನ ಜನರು ಅವರನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿದ್ದಾರೆ. ಆವರೇ ನಮ್ಮ ನಾಯಕರು. ಲೋಕಾಯುಕ್ತ ವರದಿಯಿಂದ ಸರ್ಕಾರಕ್ಕೆ ಯಾವುದೇ ಕಟಂಕ ಇಲ್ಲ ಎಂದು ಸ್ನೇಹ ನಿಷ್ಠೆಗೆ ಮತ್ತೊಂದು ಹೆಸರು ಎಂಬಂತಿರುವ ಸೋಮಣ್ಣ ಸಿದ್ದಗಂಗಾ ಮಠಕ್ಕೆ ಹೋಗುವ ಮುನ್ನ ಹೇಳಿದರು.

ಹೀಗಾಗಿ ಲೋಕಾಯುಕ್ತ ವರದಿ ತಮ್ಮ ಹೆಸರನ್ನು ಯಾವ ಕಾರಣಕ್ಕೆ ಸೇರಿಸಲಾಗಿದೆ ಎಂಬುದನ್ನು ಕೂಲಂಕುಷವಾಗಿ ಪರಿಶೀಲಿಸಿ ನಂತರ ಪ್ರತಿಕ್ರಿಯಿಸುವೆ ಎಂದು ಸೋಮಣ್ಣ ಹೇಳಿದ್ದಾರೆ.

ಯಡಿಯೂರಪ್ಪ ಅವರನ್ನು ನಂಬಿಕೊಂಡ ನಿಮ್ಮ ಸ್ಥಾನಕ್ಕೂ ಕುತ್ತು ಬರುವ ಸಾಧ್ಯತೆಯಿದೆಯೇ ಎಂಬ ಪ್ರಶ್ನೆಗೆ ಆ ರೀತಿ ಪರಿಸ್ಥಿತಿ ಬಂದರೆ ನೋಡೋಣ ದೇವರಿದ್ದಾನೆ ಎಂದರು. ಸಿದ್ದಗಂಗಾ ಮಠಕ್ಕೆ ಭೇಟಿ ನೀಡುತ್ತಿರುವುದಕ್ಕೆ ಯಾವುದೇ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ ಎಂದು ಮಾಧ್ಯಮ ಮಿತ್ರರಿಗೆ ಹೇಳಿ ತುಮಕೂರು ಕಡೆಗೆ ಚಲಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+