ನವಜಾತ ಹೆಣ್ಣು ಮಗುವನ್ನು ನೆಲಕ್ಕೆ ಎಸೆದ ನಿರ್ದಯಿ ಅಪ್ಪ!

ಕೆಂಗೇರಿ ಬಳಿಯ ಕೋಡಿಪಾಳ್ಯದಲ್ಲಿ ಕಿರಾಣಿ ಅಂಗಡಿ ಇಟ್ಟಿರುವ 'ಮಾನಸಿಕ ವಿಕಲ' ಸತೀಶ್ ಗೌಡನೇ ಆರೋಪಿ. ಆತನ ಹೆಂಡತಿ ದಿವ್ಯಲಕ್ಷ್ಮಿ ಹತ್ತುದಿನಗಳ ಹಿಂದೆ ಹೆಣ್ಣುಮಗುವಿಗೆ ಜನ್ಮ ನೀಡಿದ್ದಳು. ಆದರೆ, ಸತೀಶನಿಗೆ ಬೇಕಾಗಿದ್ದುದು ಗಂಡುಮಗು.
ಗಂಡು ಮಗುವೇ ಬೇಕೆಂದು ಹೆಂಡತಿಯಿಂದ ವಾಗ್ದಾನ ಪಡೆದಿದ್ದ ಸತೀಶ್ ಗೌಡ ಆಸ್ಪತ್ರೆಯಲ್ಲಿ ಮಗು ಹುಟ್ಟಿದಾಗಲೇ ರಾದ್ಧಾಂತ ಮಾಡಿದ್ದ. ನಂತರ ದಿವ್ಯಲಕ್ಷ್ಮಿ ಮನೆಗೆ ಮರಳಿದಾಗ, ಹೆಂಡತಿಯಿಂದ ಮಗುವನ್ನು ಕಿತ್ತುಕೊಂಡು ನೆಲಕ್ಕೆ ಎಸೆದಿದ್ದಾನೆ.
ಮಗುವನ್ನು ಇಂದಿರಾ ಗಾಂಧಿ ಸ್ಮಾರಕ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಜೀವನ್ಮರಣದ ಮಧ್ಯೆ ಮಗು ತುಯ್ದಾಡುತ್ತಿದೆ. ಅಪ್ಪ ಪರಾರಿಯಾಗಿದ್ದಾನೆ. ಅಮ್ಮ ಕಂಬನಿ ಸುರಿಸುತ್ತ ಮಗುವಿನ ಜೀವಕ್ಕಾಗಿ ಪ್ರಾರ್ಥಿಸುತ್ತಿದ್ದಾಳೆ. ಸತೀಶನ ವಿರುದ್ಧ ಕೊಲೆಗೆ ಯತ್ನಿಸಿದ ಆರೋಪ ಹೊರಿಸಲಾಗಿದ್ದು ಪ್ರಕರಣ ದಾಖಲಿಸಲಾಗಿದೆ.












Click it and Unblock the Notifications