ಸಮ್ಮೋಹ ಮಾಡಿ ಸಂಭೋಗಿಸಿದ ಹಜರತ್ ಬಾಬಾಗೆ ಗೂಸಾ

ಆರೋಪಿ ಹಜರತ್ ಮೊಹಮದ್ ವಲೀವುಲ್ಲಾ ಸಮೀರುಲ್ಲಾ ಸಹ ಇದೇ ಬಡಾವಣೆಯವನು. ಹೆಂಗೆಳೆಯರಿಂದ ಗೂಸಾ ತಿಂದು ಮೇಯೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಬಾಧಿತ ಯುವತಿ 11 ಮಕ್ಕಳ ಪೈಕಿ ಕೊನೆಯವಳು. ಅವಳ ಅಪ್ಪ-ಅಮ್ಮ ಎಷ್ಟೂ ಗಂಡುಗಳನ್ನು ನೋಡಿದರೂ ಯಾವುದೂ ಬರಕತ್ತಾಗಲಿಲ್ಲ. ಇದರಿಂದ ಬೇಸತ್ತ ಯುವತಿ ಜೂನ್ ಮೊದಲ ವಾರದಲ್ಲಿ ಬಾಬಾ ಬಳಿ ತನ್ನ ಗೋಳನ್ನು ನಿವೇದಿಸಿಕೊಂಡಳು.
ಬಾಬಾ, ರಾತ್ರಿ ವೇಳೆ ಮನೆಗೆ ಬರುವಂತೆ ಯುವತಿಗೆ ಪುಸಲಾಯಿಸಿದ. ಅಲ್ಲಿ ಒಂದಷ್ಟು ಮಂತ್ರಗಳನ್ನು ಹೇಳುತ್ತಾ ಯುವತಿಯ ಮೇಲೆ ಹಿಪ್ನಾಟಿಸಂ ಮಾಡಿ, ತನ್ನ ಕಾರ್ಯಾಚರಣೆಗೆ ಇಳಿದಿದ್ದ. ಯುವತಿಯು ಭೌತಿಕವಾಗಿ ಬಾಬಾ ವಶವಾದಳು. ಕೆಲವೊಂದು ಭಂಗಿಗಳಲ್ಲಿ ಫೋಟೋಗಳನ್ನೂ ತೆಗೆದಿದ್ದ. ಆ ಫೋಟೋಗಳನ್ನು ತೋರಿಸಿ, ನನ್ನನ್ನು ಬ್ಲ್ಯಾಕ್ ಮೇಲ್ ಮಾಡತೊಡಗಿದ್ದ. ಕೊನೆಗೆ ಅತ್ಯಾಚಾರವನ್ನೂ ಮಾಡಿದ ಎಂದು ಯುವತಿ ಪೊಲೀಸರಿಗೆ ದೂರು ಮೂಲಕ ತಿಳಿಸಿದ್ದಾಳೆ.
ಅಪಾಯವನ್ನರಿತ ಯುವತಿ ಘಟನೆಯ ಬಳಿಕ ಬಾಬಾನತ್ತ ಸುಳಿಯುವುದನ್ನು ಬಿಟ್ಟಳು. ಆದರೆ ಅವ ಫೋಟೋ ತೋರಿಸಿ, ಬೆದರಿಕೆಯೊಡ್ಡತೊಡಗಿದ. ಅಷ್ಟೇ ಅಲ್ಲ 30,000 ರುಪಾಯಿ ಹಣ ನಿಡುವಂತೆಯೂ ಪೀಡಿಸತೊಡಗಿದ. ಜತೆಗೆ, ಮದುವೆಗೆಂದು ತೆಗೆದಿರಿಸಿರುವ ಆಭರಣಗಳನ್ನೂ ಕೊಡುವಂತೆ ಕೇಳಿದ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.
ಆದರೆ ಯುವತಿ ಇದ್ಯಾವುದಕ್ಕೂ ಬಗ್ಗಲಿಲ್ಲ. ಕೊನೆಗೆ ಮನೆಯವರಿಗೂ ಕಳೆದ ಗುರುವಾರ ವಿಷಯ ತಿಳಿಸಿದಳು. ನೆರೆಹೊರೆಯವರೂ ಜತೆಯಾಗಿ ಪೊಲೀಸರ ಸಹಾಯ ಪಡೆಯುವುದಕ್ಕೂ ಮುನ್ನ ಬಾಬಾ ಮನೆಗೆ ತೆರಳಿ, ಅವನಿಗೆ ಸರಿಯಾಗಿ ಗೂಸಾ ಕೊಟ್ಟರು. ಸ್ವಲ್ಪ ಸಮಯದ ನಂತರ ಬಂದ ಪೊಲೀಸರು ಬಾಬಾನನ್ನು ಆಸ್ಪತ್ರೆಗೆ ಸೇರಿಸಿ, ಅವನ ವಿರುದ್ಧ ಕೇಸು ದಾಖಲಿಸಿದ್ದಾರೆ.












Click it and Unblock the Notifications