ಮಾರಿಷಸಿನಿಂದ ಕ್ಷೇಮವಾಗಿ ಹಿಂದಿರುಗಿದ ಯಡಿಯೂರಪ್ಪ
ಬೆಂಗಳೂರು,
ಜುಲೈ25: ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಾರಿಷಸ್ ನಿಂದ ಕ್ಷೇಮವಾಗಿ ಹಿಂದಿರುಗಿದ್ದಾರೆ. ಆದರೆ ಮುಂದಿದೆ ಮಾರಿ ಹಬ್ಬ... ಲೋಕಾಯುಕ್ತರ 'ಗಣಿಗಾರಿಕೆ' ಭೀತಿ ಎದುರಿಸುತ್ತಿರುವ ಮುಂಬೈ ಮೂಲಕ ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಸೋಮವಾರ ಬೆಳಗ್ಗೆ 8 ಗಂಟೆಗೆ ಆಗಮಿಸಿದ್ದಾರೆ. ಒಂದು ವಾರದ ಹಿಂದೆ ಕುಟುಂಬ ಸಮೇತ ಅವರು ಮಾರಿಷಸ್ ಪ್ರವಾಸಕ್ಕೆ ತೆರಳಿದ್ದರು. ಆರೇಳು ಸಚಿವರು ಯಡಿಯೂರಪ್ಪ ಅವರನ್ನು ಸ್ವಾಗತಿಸಿದರು. id="toptextpromo">ಫೋನ್
ಕದ್ದಾಲಿಕೆ ಅಂತಹ ಅಕ್ಷಮ್ಯ ಅಪರಾಧ ಮಾಡೋಲ್ಲ. ಲೋಕಾಯುಕ್ತರು ವರದಿ ಸಲ್ಲಿಸಿದ ಬಳಿಕ ಅಕ್ರಮ ಗಣಿಗಾರಿಕೆ ಬಗ್ಗೆ ಕ್ರಮ ಕೈಗೊಳ್ಳುವೆ. ಇಂದು ಸಂಜೆ ವೇಳೆಗ ಪತ್ರಿಕಾಗೋಷ್ಠಿ ನಡೆಸಿ ತಮ್ಮ ಭವಿಷ್ಯದ ಕಾರ್ಯತಂತ್ರದ ಬಗ್ಗೆ ಮಾಹಿತಿ ನೀಡುವೆ ಎಂದು ಯಡಿಯೂರಪ್ಪ ವಿಮಾನ ನಿಲ್ದಾಣದಲ್ಲಿ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು. id='are-slot-1' class='oiad oi-axt oiadv'> id='top-searched-articles'>ನನ್ನ
ಆಡಳಿತದಲ್ಲಿ ಕರ್ನಾಟಕ ಅಭಿವೃದ್ಧಿ ಹೊಂದುವುದನ್ನು ದೇವೇಗೌಡ ಕುಟುಂಬಕ್ಕೆ ಸಹಿಸಲಾಗುತ್ತಿಲ್ಲ. ಅದಕ್ಕೇ ಇಲ್ಲಸಲ್ಲದ ಆರೋಪ, ಆತಂಕಗಳನ್ನು ಸೃಷ್ಟಿಸುತ್ತಿದ್ದಾರೆ ಎಂದೂ ಕಿಡಿಕಾರಿದರು.











Click it and Unblock the Notifications