ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ರಮ ಗಣಿ ವರದಿ: ಎಸ್ಎಂ ಕೃಷ್ಣಗೆ ಕ್ಲೀನ್ ಚಿಟ್

By Srinath
|
Google Oneindia Kannada News

Union Minister SM Krishna
ಬೆಂಗಳೂರು, ಜುಲೈ24: 'ಅಕ್ರಮ ಗಣಿಗಾರಿಕೆ ಕುರಿತ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ವರದಿಯಲ್ಲಿ ವಿದೇಶಾಂಗ ಸಚಿವ ಎಸ್. ಎಂ. ಕೃಷ್ಣ ಅವರ ಹೆಸರೂ ಪ್ರಸ್ತಾಪವಾಗಿದೆ' ಎಂದು ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಸುದ್ದಿ ಕೇಂದ್ರ ಸರಕಾರವನ್ನು ಕಳೆದ ವಾರ ಇಕ್ಕಟ್ಟಿಗೆ ಸಿಕ್ಕಿಸಿತ್ತು. ಈ ಹಿನ್ನೆಲೆಯಲ್ಲಿ ಹಿರಿಯ ಸಚಿವರು ತರಾತುರಿಯಲ್ಲಿ ಸಭೆ ಸೇರಿ, ಈ ಬಗ್ಗೆ ಚರ್ಚೆಯನ್ನೂ ನಡೆಸಿದರು.

ಕೃಷ್ಣ ಹೆಸರು ಪ್ರಸ್ತಾಪಕ್ಕೆ ಸಂಬಂಧಿಸಿದಂತೆ ಮಾಧ್ಯಮ ಪ್ರತಿನಿಧಿಗಳಿಂದ ಎದುರಾಗುವ ಪ್ರಶ್ನೆಗಳಿಗೆ ಯಾವ ರೀತಿ ಉತ್ತರ ಕೊಡಬೇಕು ಎಂಬ ಬಗ್ಗೆ ಈ ಸಚಿವರು ಸಮಾಲೋಚನೆ ನಡೆಸಿದರೆಂದು ಉನ್ನತ ಮೂಲಗಳು ತಿಳಿಸಿವೆ. ಆದರೆ, ಸ್ವತಃ ಹೆಗ್ಡೆ ಅವರೇ 'ಕೃಷ್ಣ ಹೆಸರು ವರದಿಯಲ್ಲಿ ಎಲ್ಲೂ ಪ್ರಸ್ತಾಪಿಸಿಲ್ಲ' ಎಂದು ಸಾರಿದ ಬಳಿಕ ಕಾಂಗ್ರೆಸ್ ಹೈಕಮಾಂಡ್ ನಿಟ್ಟುಸಿರುಬಿಟ್ಟಿದೆ.

English summary
As the media last week carried Lokayukta Justice Santosh Hegde's leaked illegal mining report the name of Union Minister SM Krishna also mentioned. But Justice Hegde himself clarified that no where the name of Krishna figured.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X