ಬಿಹಾರ ಲೋಕಾಯುಕ್ತ ಆಗಲು ಸಂತೋಷ್ ಹೆಗ್ಡೆಗೆ ಆಫರ್?

ಹಿರಿಯ ವಕೀಲ ಶಾಂತಿಭೂಷಣ್ ಮೂಲಕ ನಿತೀಶ್ ಈ ಆಹ್ವಾನ ನೀಡಿದ್ದಾರೆ ಎನ್ನಲಾಗಿದೆ. ಇದಕ್ಕೆ ಪುಷ್ಟಿ ನೀಡುವಂತೆ ಇತ್ತೀಚೆಗೆ ಲೋಕಾಯುಕ್ತ ಪಡೆ ಬಲಗೊಳಿಸಲು ಅಣ್ಣಾ ಹಜಾರೆ ನೆರವು ಪಡೆಯುತ್ತಿರುವುದಾಗಿ ನಿತೀಶ್ ಹೇಳಿದ್ದರು.
ಬಿಹಾರದಲ್ಲಿ ಲಾಲೂ ಕುಟುಂಬದ ಆಡಳಿತ ನಂತರ ನಿತೀಶ್ ಕುಮಾರ್ ನೇತೃತ್ವದ ಸರ್ಕಾರ ಜನತೆಯ ವಿಶ್ವಾಸ ಗಳಿಸಿಕೊಂಡಿದೆ. ಆದರೆ, ಇತ್ತೀಚೆಗೆ ಭೂ ಹಗರಣದಲ್ಲಿ ನಿತೀಶ್ ಹೆಸರು ಕಾಣಿಸಿಕೊಂಡಿತ್ತು.
ಲೋಕಪಾಲ್ ಮಸೂದೆ ಮಂಡನೆಯ ಪ್ರಕ್ರಿಯೆಗಳು ಮುಗಿದ ನಂತರ ಸಂತೋಷ್ ಹೆಗ್ಡೆ ಬಿಹಾರಕ್ಕೆ ತೆರಳುವ ಸಾಧ್ಯತೆ ಇದೆ ಎನ್ನಲಾಗಿದೆ. ಕರ್ನಾಟಕದಲ್ಲಿ ಅಕ್ರಮ ಗಣಿಗಾರಿಕೆ ಕುರಿತ ಲೋಕಾಯುಕ್ತ ವರದಿ ಉಂಟು ಮಾಡಿರುವ ರಾಜಕೀಯ ಸಂಚಲನದ ಬಿಸಿ ದೇಶದೆಲ್ಲೆಡೆ ತಟ್ಟುತ್ತಿದೆ.
ಬಿಹಾರದ ಭ್ರಷ್ಟಾಚಾರ ಮಟ್ಟ ಹಾಕಲು ಸಂತೋಷ್ ಹೆಗ್ಡೆ ಸಮರ್ಥರು ಎಂದು ನಿತೀಶ್ ನಂಬಿದ್ದಾರೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಇನ್ನೂ ಹೊರಬಿದ್ದಿಲ್ಲ. ಶಾಂತಿಭೂಷಣ್ ಸೂಚನೆಯಂತೆ ಅಲ್ಲಿನ ಲೋಕಾಯುಕ್ತರಿಗೆ ನೆರವಾಗಿದ್ದೆ. ಬಿಹಾರಕ್ಕೆ ಹೋಗುವ ಉದ್ದೇಶ ಇಲ್ಲ ಎಂದು ಸಂತೋಷ್ ಹೆಗ್ಡೆ ಪ್ರತಿಕ್ರಿಯಿಸಿದ್ದಾರೆ.












Click it and Unblock the Notifications