ವೆನ್ ರೋಮ್ ಈಸ್ ಬರ್ನಿಂಗ್ ಯಡಿಯೂರಪ್ಪಜೀ ಕೂಲ್ ಕೂಲ್!

BSY along with Reddy Bro's
ಬೆಂಗಳೂರು, ಜುಲೈ22: ಮುಖ್ಯಮಂತ್ರಿ ಯಡಿಯೂರಪ್ಪ ಗುಂಪು ಹಿಂದೆಂದಿಗಿಂತ ಅಚಲ ವಿಶ್ವಾಸದಲ್ಲಿದೆ. ಈ ಹಿಂದೆ ಅನೇಕ ಸಂಕಷ್ಟ ಎದುರಿಸಿಯೂ ಕುರ್ಚಿ ಉಳಿಸಿಕೊಂಡಿರುವ ಯಡಿಯೂರಪ್ಪ ಈ ಬಾರಿಯೂ ಗೆಲುವಿನ ನಗೆ ಬೀರುತ್ತಾರಾ?

ಬುಧವಾರ ರಾತ್ರಿ ಲೋಕಾಯುಕ್ತರ ಗಣಿ ವರದಿ ಸೋರಿಕೆ ಆಗುತ್ತಿದ್ದಂತೆಯೇ ಸಾರ್ವಜನಿಕ ವಲಯದಲ್ಲಿ ಬಲವಾಗಿ ಕೇಳಿಬರುತ್ತಿರುವ ಪ್ರಶ್ನೆ ಇದು. ಆದರೆ ಗಣಿ ವರದಿ ಸೋರಿಕೆಯಾಗಿ ಇಷ್ಟೆಲ್ಲ ಅವಾಂತರ ಸೃಷ್ಟಿಯಾಗಿದ್ದರೂ ಮುಖ್ಯಮಂತ್ರಿ ಯಡಿಯೂರಪ್ಪ ಪಾಳೆಯದಲ್ಲಿ ಮಾತ್ರ ಒಂದಿನಿತೂ ಆತಂಕ ಕಾಣುತ್ತಿಲ್ಲ.

ಗಣಿ ಕಂಪನಿಗಳಿಂದ ದೇಣಿಗೆ ಪಡೆದಿರುವ ಬಗ್ಗೆ ಮಾಹಿತಿ ಸೋರಿಕೆಯಾಗಿದ್ದರೂ ದೇಣಿಗೆ ನೀಡಿದ್ದಕ್ಕೆ ಪ್ರತಿಯಾಗಿ ಆ ಕಂಪನಿಗಳಿಗೆ ಸರ್ಕಾರದಿಂದ ಏನಾದರೂ ಅನುಕೂಲ ಮಾಡಿಕೊಟ್ಟಿದ್ದಾರೆ ಎಂಬುದನ್ನು ಸಾಬೀತುಪಡಿಸಲು ಸಾಧ್ಯವಿಲ್ಲ ಎಂಬುದು ಅವರ ಬೆಂಬಲಿಗರಲ್ಲಿ ವಿಶ್ವಾಸ ತರುತ್ತಿದೆ.

ಹೀಗಾಗಿಯೇ, 'ನೋಡುತ್ತಿರಿ. ಏನೂ ಆಗುವುದಿಲ್ಲ. ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿ ನಿರಾತಂಕವಾಗಿ ಮುಂದುವರೆಯುತ್ತಾರೆ. ವರದಿ ಪಾವಿತ್ರ್ಯ ಕಳೆದುಕೊಂಡಿದೆ. ಹೀಗಾಗಿ ಅದನ್ನು ಸ್ವೀಕರಿಸುವುದು ಬೇಡ. ಬದಲಿಗೆ, ತಿರಸ್ಕರಿಸುವುದೇ ಉತ್ತಮ' ಎಂದು ವಿಶ್ವಾಸದ ನಗೆ ಬೀರುತ್ತಿದ್ದಾರೆ.

ಮಾರಿಷಸ್‌ನಲ್ಲಿ ವಿಶ್ರಾಂತಿ ಪಡೆಯುತ್ತಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ವರದಿ ಸೋರಿಕೆ ಕುರಿತು ತಮ್ಮ ಆಪ್ತರ ಜತೆ ದೂರವಾಣಿ ಮೂಲಕ ಮಾತನಾಡಿದ್ದಾರೆ. ಯಾವಾಗಲು ದುಸುಮುಸು ಎನ್ನುತ್ತಲೇ ಇರುವ ಯಡಿಯೂರಪ್ಪ ಪ್ರಸನ್ನ ವದನರಾಗಿದ್ದಾರೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+