ರೈಲ್ವೆ ಸ್ಟೇಷನ್‌ ಮಾಸ್ಟರುಗಳ ಗೋಳು ನೀವೂ ಸ್ವಲ್ಪ ಕೇಳಿ!

Railway Station Masters strike
ಬೆಂಗಳೂರು, ಜೂನ್ 22: ರೈಲ್ವೆ ಸ್ಟೇಷನ್ ಮಾಸ್ಟರ್ ಗಳ ಮೂಲ ವೇತನದಲ್ಲಿ 4,200 ರೂಪಾಯಿ ಹೆಚ್ಚಳ ಮಾಡುವಂತೆ ಒತ್ತಾಯಿಸಿ ಅಖಿಲ ಭಾರತ ಸ್ಟೇಷನ್ ಮಾಸ್ಟರ್ ಗಳ ಒಕ್ಕೂಟದ (ಎಐಎಸ್‌ಎಂಎ) ಸದಸ್ಯರು ನಗರ ರೈಲು ನಿಲ್ದಾಣದ ಬಳಿ ಇರುವ ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಚೇರಿ ಎದುರು ಗುರುವಾರ ಉಪವಾಸ ಸತ್ಯಾಗ್ರಹ ನಡೆಸಿದರು. ಹುಬ್ಬಳ್ಳಿಯಲ್ಲಿಯೂ ಸ್ಟೇಷನ್ ಮಾಸ್ಟರ್ ಗಳು 24 ಗಂಟೆಗಳ ಉಪವಾಸ ಸತ್ಯಾಗ್ರಹವೂ ನಡೆಸಿದ್ದಾರೆ.

ಆರನೇ ವೇತನ ಆಯೋಗವು ನೀಡಿದ ವರದಿಯಲ್ಲಿ ಸ್ಟೇಷನ್ ಮಾಸ್ಟರ್ ಗಳಿಗೆ ಶಿಫಾರಸು ಮಾಡಿದ್ದ ವೇತನದ ಪ್ರಮಾಣ ಕಡಿಮೆಯಾಗಿತ್ತು. ಈ ಹಿನ್ನೆಲೆಯಲ್ಲಿ ರೈಲ್ವೆ ಮಂಡಳಿಯು ಮೂಲ ವೇತನದಲ್ಲಿ ಮಾಸಿಕ 4,200 ರೂಪಾಯಿ ಹೆಚ್ಚಳ ಮಾಡುವುದಾಗಿ ಭರವಸೆ ನೀಡಿತ್ತು. ಆದರೆ ಆ ಭರವಸೆಯನ್ನು ಈವರೆಗೂ ಈಡೇರಿಸಿಲ್ಲ ಎಂದು ಧರಣಿನಿರತರು ದೂರಿದರು.

'ರೈಲ್ವೆ ಸ್ಟೇಷನ್ ಮಾಸ್ಟರ್ ಗಳ ಬೇಡಿಕೆಗಳು ನ್ಯಾಯಸಮ್ಮತವಾಗಿವೆ. ವೇತನ ಹೆಚ್ಚಳ ಮಾಡಲು ರೈಲ್ವೆ ಮಂಡಳಿಯೂ ಒಪ್ಪಿಕೊಂಡಿದೆ. ಆದರೆ ಹಣಕಾಸು ಇಲಾಖೆಯು ವೇತನ ಹೆಚ್ಚಳ ಮಾಡಲು ವಿಳಂಬ ಮಾಡುತ್ತಿದೆ' ಎಂದು ನೈರುತ್ಯ ರೈಲ್ವೆ ಮಜ್ದೂರ್ ಸಂಘದ ವಿಭಾಗೀಯ ಅಧ್ಯಕ್ಷ ಕೆ.ಎನ್.ರಾವ್ ಆರೋಪಿಸಿದರು.

ಇಲಾಖೆಯಿಂದ ನೀಡುತ್ತಿರುವ ಸಮವಸ್ತ್ರಗಳ ಗುಣಮಟ್ಟ ಚೆನ್ನಾಗಿಲ್ಲ. ಈ ಹಿನ್ನೆಲೆಯಲ್ಲಿ ಸಮವಸ್ತ್ರಕ್ಕೆ ಬದಲಾಗಿ ಎರಡು ವರ್ಷಕ್ಕೊಮ್ಮೆ ಸಮವಸ್ತ್ರ ಖರೀದಿಸಲು ಮೂರು ಸಾವಿರ ರೂಪಾಯಿ ಹಣ ಕೊಡಬೇಕು. ಸ್ಟೇಷನ್ ಮಾಸ್ಟರ್ ಗಳ ಮೂಲ ವೇತನಕ್ಕೆ ಅನುಗುಣವಾಗಿ ಮಾಸಿಕ ಶೇ 30ರಷ್ಟು ಸುರಕ್ಷತಾ ಭತ್ಯೆ ನೀಡಬೇಕು. ಸ್ಟೇಷನ್ ಮಾಸ್ಟರ್ ಗಳ ಕೆಲಸದ ಅವಧಿಯನ್ನು ಎಂಟು ಗಂಟೆಗಳಿಗೆ ನಿಗದಿಪಡಿಸಬೇಕು ಎಂದು ಧರಣಿನಿರತರು ಒತ್ತಾಯಿಸಿದರು.

ಎಐಎಸ್‌ಎಂಎ ವಿಭಾಗೀಯ ಅಧ್ಯಕ್ಷ ಮಹಮ್ಮದ್ ಇಕ್ಬಾಲ್, ಕಾರ್ಯದರ್ಶಿ ಟಿ.ನೆಡುಮಾರನ್, ನೈರುತ್ಯ ರೈಲ್ವೆ ಮಜ್ದೂರ್ ಸಂಘದ ವಿಭಾಗೀಯ ಸಹ ಕಾರ್ಯದರ್ಶಿ ಕುಮಾರಸ್ವಾಮಿ ಧರಣಿಯಲ್ಲಿ ಪಾಲ್ಗೊಂಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+