ವಿಪ್ರೊ ಮೊದಲ ತ್ರೈಮಾಸಿಕ ಲಾಭ 1335 ಕೋಟಿ!
ಮುಂಬೈ,
ಜುಲೈ20: ದೇಶದ ಮೂರನೇ ಅತೊ ದೊಡ್ಡ ಸಾಫ್ಟ್ ವೇರ್ ರಫ್ತು ಕಂಪನಿ, ಬೆಂಗಳೂರಿನ ವಿಪ್ರೊ ಮಾರ್ಚ್ 31, 2011ಕ್ಕೆ ಕೊನೆಗೊಂಡ ಮೊದಲ ತ್ರೈಮಾಸಿಕದಲ್ಲಿ 1,335 ಕೋಟಿ ರುಪಾಯಿ ಒಟ್ಟು ಲಾಭ ಗಳಿಸಿದ್ದು, ಶೇ. 1.23 ಪ್ರಗತಿ ಕಂಡಿದೆ. ಸಂಬಳಗಳ ಹೆಚ್ಚಳ ವೆಚ್ಚದ ಹೊರತಾಗಿಯೂ ಇಷ್ಟೊಂದು ಲಾಭ ದಾಖಲಿಸಿರುವುದು ಗಮನಾರ್ಹ. id="toptextpromo">ಮಾರ್ಚ್
ಗೆ ಕೊನೆಗೊಂಡ ಮೊದಲ ತ್ರೈಮಾಸಿಕದಲ್ಲಿ ಮಾರಾಟದಿಂದ ಒಟ್ಟು ಆದಾಯ 8,564 ಕೋಟಿ ರುಪಾಯಿಯಷ್ಟಿದೆ. ಕಳೆದ ವರ್ಷ ನಾಲ್ಕನೇ ತ್ರೈಮಾಸಿಕದಲ್ಲಿ 1,318.6 ಕೋಟಿ ಒಟ್ಟು ಲಾಭ ಹೊಂದಿತ್ತು. id='are-slot-1' class='oiad oi-axt oiadv'> id='top-searched-articles'>ಗ್ರಾಹಕರಿಗೆ
ಅತ್ಯುನ್ನತ ಶ್ರೇಣಿಯ ಸಾಫ್ಟ್ ವೇರ್ ಒದಗಿಸಲು ಹೆಚ್ಚು ಬಂಡವಾಳ ಹೂಡುವುದಾಗಿ ವಿಪ್ರೊ ಅಧ್ಯಕ್ಷ ಅಜೀಂ ಪ್ರೇಮ್ ಜಿ ಬುಧವಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ತ್ರೈಮಾಸಿಕದಲ್ಲಿ 4,000 ಮಂದಿಯನ್ನು ನೇಮಕ ಮಾಡಿಕೊಳ್ಳಲಾಗಿದ್ದು, ಕಂಪನಿಯ ಒಟ್ಟು ಉದ್ಯೋಗಿಗಳ ಸಂಖ್ಯೆ 1,26,490ಕ್ಕೆ ಏರಿದೆ.











Click it and Unblock the Notifications