ಯಶವಂತಪುರ-ಶಿರಡಿ ಎಕ್ಸ್‌ಪ್ರೆಸ್ ರೈಲಿನ ಚೈನು ಎಳೆದವರಾರು?

ವಾರಕ್ಕೊಮ್ಮೆ ಮಾತ್ರ ಸಂಚರಿಸುತ್ತಿದ್ದ 'ಗರೀಬ್ ರಥ ಎಕ್ಸ್‌ಪ್ರೆಸ್' ಎಂಬ ಹೆಸರಿನ ಈ ರೈಲು ಸಂಪೂರ್ಣ ಹವಾ ನಿಯಂತ್ರಣ ಸೌಲಭ್ಯ ಹೊಂದಿದ್ದರಿಂದ ಬಡ ಹಾಗೂ ಮಧ್ಯಮ ವರ್ಗದ ಭಕ್ತರು ಕಡಿಮೆ ದರದಲ್ಲಿ ಸುಖಕರವಾಗಿ ಶಿರಡಿಗೆ ಹೋಗಲು ಅನುಕೂಲವಾಗಿತ್ತು.
ವಿಶೇಷ ರೈಲನ್ನು ಕಾಯಂಗೊಳಿಸಿ ವಾರಕ್ಕೆರಡು ಸಲವಾದರೂ ಸಂಚರಿಸಲು ಕ್ರಮ ಕೈಗೊಳ್ಳುವಂತೆ ಈ ಭಾಗದ ರೈಲು ಪ್ರಯಾಣಿಕರು ಅನೇಕ ಬಾರಿ ಮನವಿ ಮಾಡಿಕೊಂಡಿದ್ದರು. ಆದರೆ ನಮ್ಮ ಬೇಡಿಕೆಗೆ ವ್ಯತಿರಿಕ್ತವಾಗಿ ಮೊನ್ನೆ ಜುಲೈ 1 ರಿಂದ ಈ ರೈಲು ಸಂಚಾರವನ್ನೇ ಪೂರ್ತಿಯಾಗಿ ರದ್ದುಪಡಿಸಿರುವುದು ಆಘಾತಕಾರಿಯಾಗಿದ್ದು, ಇಲಾಖೆಯ ಈ ಕ್ರಮ ಅತ್ಯಂತ ಖಂಡನಾರ್ಹವಾಗಿದೆ.
ಬೆಂಗಳೂರಿನಿಂದ ಶಿರಡಿಗೆ ನೇರವಾಗಿ ಸಂಪರ್ಕ ಕಲ್ಪಿಸುತ್ತಿದ್ದ ಏಕೈಕ ರೈಲಿನ ಓಡಾಟ ರದ್ದುಪಡಿಸಿರುವುದರಿಂದ ರಾಜಧಾನಿ ಹಾಗೂ ಉತ್ತರ ಕರ್ನಾಟಕದ ಯಾತ್ರರ್ಥಿಗಳು ಶಿರಡಿಗೆ ಹೋಗಲು ಹರಸಾಹಸ ಪಡುವಂತಾಗಿದೆ. ಶಿರಡಿ ಕ್ಷೇತ್ರ ಹಿಂದು-ಮುಸ್ಲಿಮರ ಪ್ರಸಿದ್ಧ ಭಾವೈಕ್ಯತಾ ಕೇಂದ್ರವಾಗಿದೆ. ಪ್ರತಿ ವಾರವೂ ಪ್ರಯಾಣಿಕರಿಂದ ಭರ್ತಿಯಾಗಿ ಲಾಭದಲ್ಲೇ ಸಂಚರಿಸುತ್ತಿದ್ದ ಈ ರೈಲನ್ನು ಏಕೆ ರದ್ದುಪಡಿಸಲಾಯಿತು ಎಂಬುದು ತಿಳಿದಿಲ್ಲ.
ಸಾಯಿ ಭಕ್ತರಿಗೆ ಅನುಕೂಲವಾಗುವಂತೆ ರೈಲ್ವೆ ಇಲಾಖೆಯು ಯಶವಂತಪುರ-ಶಿರಡಿ ಗರೀಬ್ ರಥ ಎಕ್ಸ್‌ಪ್ರೆಸ್ ರೈಲನ್ನು ಪುನರಾರಂಭಿಸಲು ಕ್ರಮ ಕೈಗೊಳ್ಳಬೇಕೆಂದು ವಿನಂತಿ.












Click it and Unblock the Notifications