ನರ್ಸಿಂಗ್ ಹಾಸ್ಟೆಲಿಗೆ ನುಗ್ಗಿದ ಪುಂಡರು ಸೀದಾ ಮಾವನ ಮನೆಗೆ

ಬಂಧಿತರು ಆನೆಗುಂಡಿಯ, ಬಿಜೈನ ವಿಲ್ಸನ್ ಮೆಂಡೋನಕಾ, ಅಜಯ್ ಕ್ರಿಸ್ಟಾಫರ್ ಮತ್ತು ಮಾರಿಯೊ ರೋಡ್ರಿಗ್ಸ್. ಮೂವರು ಪಾನಮತ್ತರಾಗಿದ್ದರು. ಹೌಸ್ ಪ್ರಮೋಶನ್ ನರ್ಸಿಂಗ್ ಹಾಸ್ಟೆಲಿಗೆ ನುಗ್ಗಿ ಬಾಗಿಲು ತೆಗೆಯುವಂತೆ ಅರಚಾಡಿದ್ದಾರೆ.
ಆದರೆ ಯಾರೂ ಬಾಗಿಲು ತೆಗೆಯದಿದ್ದಾಗ ಕಿಟಕಿ ಬಾಗಿಲುಗಳನ್ನು ಪುಡಿ ಮಾಡಿದ ಈ ಮೂವರು ಪುಂಡರು ಲೇಡಿ ವಾರ್ಡನ್ ರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಶಬ್ದ ಕೇಳಿ ಬಂದ ನೆರೆ ಮನೆಯ ಕಿರಣ್ ಎಂಬುವವರ ಮೇಲೂ ಇವರು ಅಶ್ಲೀಲ ಪದ ಪ್ರಯೋಗ ಮಾಡಿದ್ದಾರೆ.
ವಾರ್ಡನ್ ಚೈತ್ರಾ ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ಆರೋಪಿಗಳನ್ನು ತಕ್ಷಣ ಬಂಧಿಸಿದ್ದಾರೆ. ಆದರೆ ಭಾನುವಾರ ಸಂಜೆಯ ವೇಳೆಗೆ ಮೂವರೂ ಜಾಮೀನಿನ ಮೇಲೆ ಹೊರಕ್ಕೆ ಬಂದಿದ್ದಾರೆ. ದಾಂಧಲೆ ನಡೆಸಿದ ಬಳಿಕ ಮೂವರೂ ಸ್ಥಳದಿಂದ ಕಾಲ್ಕಿತ್ತಿದ್ದರು. ಆದರೆ ಅವರು ಬಂದಿದ್ದ ಬೈಕುಗಳನ್ನು ಪತ್ತೆ ಹಚ್ಚಿ, ಮೂವರನ್ನೂ ಪೊಲೀಸರು ಬಂಧಿಸಿದ್ದರು.












Click it and Unblock the Notifications