ನಟಿ ಮಾರಿಯಾ ನಿಜವಾದ ಕೊಲೆಗಾರ್ತಿ ಎಂದ ಪ್ರಿಯಕರ
ಮುಂಬೈ,
ಜು 18: ಖಾಸಗಿ ಚಾನೆಲ್ ಪ್ರತಿನಿಧಿ ನೀರಜ್ ಗ್ರೋವರ್ ಕೊಲೆ ಪ್ರಕರಣಕ್ಕೆ ಹೊಸ ತಿರುವು ನೀಡಲು ಮಾರಿಯಾ ಪ್ರಿಯಕರ ಜೆರೋಮ್ ಯತ್ನಿಸುವಂತಿದೆ. ಜೈಲು ಶಿಕ್ಷೆ ಅನುಭವಿಸಿ ಹೊರಬಿದ್ದಿರುವ ಮಾರಿಯಾಳೆ ನಿಜವಾದ ಕೊಲೆಗಾರ್ತಿ, ನನಗೆ ಸುಮ್ಮನೆ ಶಿಕ್ಷೆ ನೀಡಿ ಪ್ರಯೋಜನವಿಲ್ಲ ಎಂದು ತೀರ್ಪನ್ನು ಪ್ರಶ್ನಿಸಿ ಮಾರಿಯ ಪ್ರಿಯಕರ ಜೆರೋಮ್ ಬಾಂಬೆ ಹೈಕೋರ್ಟ್ ಮೊರೆಹೋಗಿದ್ದಾನೆ. id="toptextpromo">ಅಧೀನ
ನ್ಯಾಯಾಲಯ ನೀಡಿದ್ದ 10 ವರ್ಷಗಳ ಶಿಕ್ಷೆಯ ತೀರ್ಪನ್ನು ಎರಡನೇ ಆರೋಪಿ ಮಾಜಿ ನೌಕಾಪಡೆ ಅಧಿಕಾರಿ ಎಮಿಲಿ ಜೆರೋಮ್, ಪ್ರಶ್ನಿಸಿ ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದಾನೆ. ಜಾಮೀನು ಅರ್ಜಿಯ ಜತೆಗೆ ಇದು ಜುಲೈ 25ರಂದು ವಿಚಾರಣೆಗೆ ಬರುವ ಸಾಧ್ಯತೆಗಳಿವೆ ಜೆರೋಮ್ ಪರ ವಕೀಲ ವಹಾಬ್ ಖಾನ್ ತಿಳಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಅಂದು
ಮಾರಿಯಾ ಹತ್ಯೆ ಮಾಡಿದ ನಂತರ ಜೆರೋಮ್ ರನ್ನು ಕರೆಸಿಕೊಂಡಳು. ನೀರಜ್ ಶವವನ್ನು ಸಾಗಿಸಲು ಜೆರೋಮ್ ಸಹಾಯ ಮಾಡಿದ್ದರು. ಆದರೆ, ಈಗ ಮಾರಿಯಾ ಕಡಿಮೆ ಶಿಕ್ಷೆ ಅನುಭವಿಸಿ ತಪ್ಪಿಸಿಕೊಂಡಿದ್ದಾಳೆ, ನನ್ನ ಕಕ್ಷಿದಾರರಿಗೆ ಅನ್ಯಾಯವಾಗಿದೆ ಎಂದು ವಕೀಲ ವಹಾಬ್ ಖಾನ್ ಹೇಳಿದ್ದಾರೆ.











Click it and Unblock the Notifications