ನನಗೆ ಮೋಕ್ಷ ಕೊಡಿ: ಮಹಾಜನತೆಯಲ್ಲಿ ದೇವೇಗೌಡ ಭಿಕ್ಷೆ
ಬೆಂಗಳೂರು
ಜು 18: 'ಪಕ್ಷ ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ಬರದಿದ್ದರೆ ತಮಗೆ ಮೋಕ್ಷ ಸಿಗುವುದಿಲ್ಲ' ಎಂಬ ಗಂಭೀರ ಚಿಂತನೆಯನ್ನು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹರಿಯಬಿಟ್ಟಿದ್ದಾರೆ. 'ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬಂದರೆ ಮಾತ್ರ ಪಕ್ಷಕ್ಕೆ ಉಳಿಗಾಲ ಇರುತ್ತದೆ. ಆದ್ದರಿಂದ ಕಾರ್ಯಕರ್ತರು ಪಕ್ಷದ ಸಂಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕು' ಎಂದು ಅವರು ಕರೆ ನೀಡಿದರು. id="toptextpromo">'ಸಾಯುವ
ಮುನ್ನ ಪ್ರತಿಯೊಬ್ಬ ಮನುಷ್ಯ ಸಹ ಒಂದು ಆಸೆ ಇಟ್ಟುಕೊಂಡಿರುತ್ತಾನೆ. ಅದು ಈಡೇರಿದರೆ ಮಾತ್ರ ಆತನಿಗೆ ಮೋಕ್ಷ ಸಿಗುತ್ತದೆ. ಅದೇ ರೀತಿಯಲ್ಲಿ ನಾನು, ಪಕ್ಷ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಬೇಕೆಂಬ ಕನಸು ಕಾಣುತ್ತಿದ್ದೇನೆ. ಆ ನನ್ನ ಆಸೆ ಈಡೇರದೆ ಹೋದಲ್ಲಿ... ನನಗೆ ಮೋಕ್ಷ ಸಿಗುವುದಿಲ್ಲ' ಎಂದು ಪಕ್ಷದ ಸಭೆಯಲ್ಲಿ ಭಾನುವಾರ ಹೇಳಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಇದೇ
ವೇಳೆ, ರಾಜ್ಯದಲ್ಲಿ ಮುಂದಿನ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದರೆ ಜೆಡಿಎಸ್ ಪಕ್ಷವನ್ನು ನಿರ್ನಾಮ ಮಾಡಿ ಬಿಡುತ್ತದೆ ಎಂದು ಆತಂಕ ವ್ಯಕ್ತಪಡಿಸಿದ ಗೌಡ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯ ಜನಪ್ರಿಯತೆ ಮತವಾಗಿ ಪರಿವರ್ತನೆಯಾಗುತ್ತಿಲ್ಲವೆಂದು ವಿಷಾದಿಸಿದರು.











Click it and Unblock the Notifications