ತಿರುಪತಿ ತಿಮ್ಮಪ್ಪನ ದರ್ಶನಭ್ಯಾಗ ಪಡೆದ ಇಸ್ರೋ ಅಧ್ಯಕ್ಷ
ತಿರುಮಲ,
ಜು.16: ಭಾರತೀಯ ಬಾಹ್ಯಾಕಾಶ ಸಂಶೋಧನಾ ಇಲಾಖೆಯ ಅಧ್ಯಕ್ಷ ರಾಧಾಕೃಷ್ಣನ್ ಅವರು ಶನಿವಾರ ತಿರುಮಲ ತಿರುಪತಿಗೆ ಭೇಟಿ ನೀಡಿ ತಿಮ್ಮಪ್ಪನ ದರ್ಶನ ಭಾಗ್ಯ ಪಡೆದರು. ತಿಮ್ಮಪ್ಪನಿಗೆ ವಿಶೇಷ ಪೂಜೆ ಸಲ್ಲಿಸಿದರು. id="toptextpromo">ಪಿಎಸ್‌ಎಲ್‌ವಿ
ಸಿ-17 ಯಶಸ್ವಿಯಾದ ಹಿನ್ನೆಲೆಯಲ್ಲಿ ರಾಧಾಕೃಷ್ಣನ್ ತಿರುಪತಿಗೆ ಭೇಟಿ ನೀಡಿದ್ದಾರೆ. ಅವರು ಕುಟುಂಬ ಸಮೇತ ಇಂದು ತಿರುಪತಿಗೆ ಆಗಮಿಸಿ ಪೂಜೆ ಸಲ್ಲಿಸಿದರು. ಇಂದು ಬೆಳಗ್ಗೆ ವಿಐಪಿ ವಿರಾಮದ ಸಮಯದಲ್ಲಿ ಅವರು ತಿಮ್ಮಪ್ಪನ ದರ್ಶನ ಪಡೆದರು. id='are-slot-1' class='oiad oi-axt oiadv'> id='top-searched-articles'> ಜಿಸ್ಯಾಟ್ 12 ಉಪಗ್ರಹವನ್ನು ಇಸ್ರೋ ಶುಕ್ರವಾರ ಯಶಸ್ವಿಯಾಗಿ ಉಡಾವಣೆ ಮಾಡಿದೆ. ಈ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಮತ್ತೊಂದು ಯಶಸ್ವಿ ಮೈಲುಗಲ್ಲನ್ನು ಸಾಧಿಸಿದೆ. ಈ ಹಿನ್ನೆಲೆಯಲ್ಲಿ ರಾಧಾಕೃಷ್ಣನ್ ಅವರು ಇಂದು ತಿರುಪತಿಗೆ ಭೇಟಿ ನೀಡಿ ತಿಮ್ಮಪ್ಪನ ದರ್ಶನ ಪಡೆದಿರುವುದು ವಿಶೇಷ. (ಏಜೆನ್ಸೀಸ್)











Click it and Unblock the Notifications