45 ಸಾವಿರ ಉದ್ಯೋಗಿಗಳಿಗೆ ಇನ್ಫೋಸಿಸ್ ಗಾಳ

Infosys CEO Kris Gopalaktrishnan
ಬೆಂಗಳೂರು ಜು 13: ಪ್ರಸಕ್ತ ಆರ್ಥಿಕ ವರ್ಷದ ಪ್ರಥಮ ತ್ರೈಮಾಸಿಕ ವರದಿಯಂತೆ ನಿವ್ವಳ ಲಾಭದಲ್ಲಿ ಕೊಂಚ ಇಳಿಕೆ ( 5.2 %) ಕಂಡರೂ, ನೇಮಕಾತಿಯಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲ ಎಂದು ಇನ್ಫೋಸಿಸ್ ಸ್ಪಷ್ಟಪಡಿಸಿದೆ.

ಈ ವರ್ಷದಲ್ಲಿ 45 ಸಾವಿರ ನೌಕರರನ್ನು ನೇಮಿಸಿಕೊಳ್ಳುವ ಗುರಿಯನ್ನು ಸಂಸ್ಥೆ ಮುಂದುವರಿಸಲಿದೆ. ಪ್ರಸಕ್ತ ತ್ತೈಮಾಸಿಕ ಅವಧಿಯಲ್ಲಿ 12,000 ನೌಕರರನ್ನು ನೇಮಿಸಿಕೊಳ್ಳಲಾಗುವುದು ಎಂದು ಇನ್ಫೋಸಿಸ್‌ ಸಿಇಒ ಕ್ರಿಸ್ ಗೋಪಾಲಕೃಷ್ಣನ್ ಹೇಳಿದ್ದಾರೆ.

ಪ್ರಸಕ್ತ ಹಣಕಾಸು ವರ್ಷದ ಆರಂಭದಲ್ಲಿ 45,000 ನೌಕರರನ್ನು ನೇಮಿಸಿಕೊಳ್ಳುವುದಾಗಿ ಇನ್ಫೋಸಿಸ್‌ ಈ ಹಿಂದೆ ಹೇಳಿತ್ತು. ಈ ಪೈಕಿ 26,000 ನೌಕರರನ್ನು ನೇರವಾಗಿ ಕಾಲೇಜು ಕ್ಯಾಂಪಸ್‌ಗಳಿಂದ ಈಗಾಗಲೇ ಆಯ್ಕೆ ಮಾಡಿದೆ.

ಕಂಪನಿಯು 2011ರ ಜೂನ್‌ 30ಕ್ಕೆ ಕೊನೆಗೊಂಡ ಪ್ರಥಮ ತ್ತೈಮಾಸಿಕ ಅವಧಿಯಲ್ಲಿ 1,722 ಕೋಟಿ ರೂ. ಲಾಭ ಗಳಿಸುವ ಮೂಲಕ ತನ್ನ ಲಾಭ ಗಳಿಕೆಯನ್ನು ಶೇ.15.72ರಷ್ಟು ಹೆಚ್ಚಿಸಿಕೊಂಡಿದೆ. ನಿವ್ವಳ ಲಾಭದಲ್ಲಿ ಮಾತ್ರ ಶೇ 5.2ರಷ್ಟು ಇಳಿಕೆ ಕಂಡಿದೆ. ಹಣಕಾಸು ವರ್ಷದ ಪ್ರಥಮ ಅವಧಿಯಲ್ಲಿ ಇನ್ಫೋಸಿಸ್‌ನಿಂದ 7,000 ನೌಕರರು ನಿರ್ಗಮಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+