ಮಧುಚಂದ್ರದಲ್ಲಿ ಮರಣ: ಎನ್ನಾರೈ ಪತ್ನಿ ಕೊಂದ ಗಂಡ ಗೇ

Honeymoon Murder:Anni Dewani, UK case
ಲಂಡನ್ ಜು 13: ಭಾರತೀಯ ಮೂಲದ ಅನ್ನಿ ದೆವಾನಿ, ಗಂಡನ ಜೊತೆ ಹನಿಮೂನ್ ಗೆ ಹೊರಟಾಗ ಸಂತೋಷದಿಂದಲೇ ಇದ್ದಳು. ಆದರೆ, ಮಧುಮಂಚಕ್ಕೇರುವಾಗ ಗಂಡ ಸೆಕ್ಸ್ ಬೇಡ ಎಂದು ನಿರಾಕರಿಸಿದ್ದು ಯಾಕೋ ಅನುಮಾನ ಹುಟ್ಟಿಸಿತು. ಸಂಶಯದ ಜಾಡು ಹಿಡಿದ ಅನ್ನಿಗೆ ಸತ್ಯ ತಿಳಿದು ಮಂಚದ ಮೂಲೆಯಲ್ಲೇ ಕುಸಿದಿದ್ದಳು. ಈಗ ಬೇಡ ಆಮೇಲೆ ಎಂದು ಸೆಕ್ಸ್ ನಿರಾಕರಿಸಿದ ಅವಳ ಪತಿ ಶ್ರಿಯನ್ ದೆವಾನಿ, ಸಲಿಂಗಿಯಾಗಿದ್ದ.

28 ವರ್ಷದ ಶ್ರಿಯಾನಿ, ಅನ್ನಿ ಜೊತೆಗೂಡಿ ಕೇಪ್ ಟೌನ್ ನಲ್ಲಿ ಮಧುಚಂದ್ರಕ್ಕೆಂದು ಬಂದಿದ್ದ. ಆದರೆ, ಹೋಗುವಾಗ ಒಬ್ಬನೇ ಇಂಗ್ಲೆಂಡ್ ಗೆ ತೆರಳಿದ್ದ. ಅನ್ನಿ ಸೆಕ್ಸ್ ಮನವಿಯನ್ನು ನಿರಾಕರಿಸಿದ ಶ್ರಿಯಾನಿ ಮುಂಬೈನಲ್ಲಿ ಆರತಕ್ಷತೆ ಆದ ಮೇಲೆ ಇದೆಲ್ಲ ಇಟ್ಟುಕೊಳ್ಳೋಣ ಎಂದಿದ್ದ. ಆದರೆ, ಅನ್ನಿಗೆ ತನ್ನ ಗಂಡ ಆತನ ಸಲಿಂಗಿ ಗೆಳೆಯನಿಗೆ ಕಳಿಸಿದ್ದ ಸರಸ ಸಂದೇಶಗಳು ಸಿಕ್ಕಿಬಿಟ್ಟಿದ್ದವು.

ತಕ್ಷಣವೇ ಗಂಡನನ್ನು ಜರಿದು ತನ್ನವರಿಗೆ ಸಂದೇಶ ಕಳಿಸಿ, ವಿಚ್ಛೇದನಕ್ಕೆ ತಯಾರಿ ನಡೆಸಿ ಎಂದಿದ್ದಳು. ಆದರೆ, ಅನ್ನಿ ಕೊಲೆಗೆ ಆಕೆ ಗಂಡ ಆಗಲೇ ಸುಪಾರಿ ನೀಡಿದ್ದ. ವಿಚ್ಛೇದನ ಪಡೆಯುವ ಅನ್ನಿ ಬಯಕೆ ಬ್ರಿಸ್ಟೋಲ್ ನ ಬಿಸಿನೆಸ್ ಮೆನ್ ಶ್ರಿಯಾನ್ ಗೆ ಆಘಾತದಂತೆ ತೋರಿತ್ತು.

ಗೇ ಕ್ಲಬ್ ವಾಕ್ಸ್ ಹಾಲ್ ಗೆ ಶ್ರಿಯಾನಿ ಖಾಯಂ ಗಿರಾಕಿಯಾಗಿದ್ದ. ಬಾಡಿಗೆ ಗೇ ಗಳನ್ನು ಬಳಸಿ ತನ್ನ ಕಾಮತೃಷೆ ತೀರಿಸಿಕೊಳ್ಳುತ್ತಿದ್ದ ಎಂದು ದಕ್ಷಿಣ ಆಫ್ರಿಕಾ ಪೊಲೀಸರು ಹೇಳಿದ್ದಾರೆ. ಸದ್ಯ ಲಂಡನ್ ಕೋರ್ಟ್ ಗೆ ಕೇಸ್ ವರ್ಗಾವಣೆಗೊಂಡಿದ್ದು, ನಾನು ನಿರಪರಾಧಿ ಎಂದು ಶ್ರಿಯಾನಿ ಹೇಳುತ್ತಿದ್ದಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+