ಎಚ್ಡಿಕೆ ಉಪವಾಸ ಅಂತ್ಯಗೊಳಿಸಿದ ಅನಂತಮೂರ್ತಿ
ಬೆಂಗಳೂರು
ಜು 10: ಜನರಲ್ಲಿ ಒಂದು ಭರವಸೆ ಮೂಡಿಸಿದವರು ನೀವು, ಮುಖ್ಯಮಂತ್ರಿಯಾಗಿದ್ದಾಗ ಸಿಎಂ ಅಧಿಕಾರಿ ಶೈಲಿಯನ್ನೇ ಬದಲಾಯಿಸಿದವರು. ಭ್ರಷ್ಟಾಚಾರ ವಿರುದ್ಧದ ಹೋರಾಟ ವೈಯಕ್ತಿಕ ದ್ವೇಷವಾಗಬಾರದು. ನಾನು ವಯಸ್ಸಿನಲ್ಲಿ ಹಿರಿಯನಾದರೂ ನಿಮ್ಮ ಅಭಿಮಾನಿ, ಪಕ್ಷ ಹೇಳಿದಂತೆ ಕೇಳಿ, ಉಪವಾಸ ಕೈ ಬಿಡಿ ಎಂದು ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಯುಆರ್ ಅನಂತಮೂರ್ತಿ ಅವರು ಎಚ್ ಡಿ ಕುಮಾರಸ್ವಾಮಿ ಅವರಲ್ಲಿ ಕೇಳಿಕೊಂಡರು. ಇದರೊಂದಿಗೆ ಕುಮಾರ್ ಅವರು ತಮ್ಮ ಉಪವಾಸ ವ್ರತವನ್ನು ಅಧಿಕೃತವಾಗಿ ಅಂತ್ಯಗೊಳಿಸಿದ್ದಾರೆ. id="toptextpromo">ಅಸಂಖ್ಯಾತ
ಅಭಿಮಾನಿಗಳು, ಕಾರ್ಯಕರ್ತರು, ಪತ್ರಕರ್ತರ ನಡುವೆ ನುಸುಳಿಗೊಂಡು ಕುಮಾರಸ್ವಾಮಿ ಅವರ ಬಳಿಗೆ ಅನಂತಮೂರ್ತಿ ಅವರು ಧಾವಿಸಿದರು. ಮೈಕ್ ಹಿಡಿದುಕೊಂಡು ಕುಮಾರಸ್ವಾಮಿಗೆ ಉಪದೇಶ ಆರಂಭಿಸಿದರು. "ತಪ್ಪು ಅಪವಾದದ ವಿರುದ್ಧ ತಿರುಗಿ ಬೀಳುವುದು ಸರಿಯಾದ ಕ್ರಮ. ಕುಮಾರಸ್ವಾಮಿಗಳೇ ನೀವು ಪಕ್ಷಾತೀತರಲ್ಲ. ಪಕ್ಷದ ನಿರ್ಧಾರಕ್ಕೆ ತಲೆಬಾಗಲೇ ಬೇಕು. ಇಂದು ಪಕ್ಷದ ಹಿರಿಯರು ಏನು ನಿರ್ಧಾರ ತೆಗದುಕೊಂಡಿದ್ದಾರೋ ಅದಕ್ಕೆ ಬೆಲೆ ಕೊಡಿ. ನೀವು ಹಣದ ಅಗತ್ಯವಿಲ್ಲದೆ ರಾಜಕಾರಣ ಸಾಧ್ಯ ಎಂಬುದನ್ನು ತೋರಿಸಿಕೊಡಿ. ನಿಮಗೆ ಆ ಸಾಮರ್ಥ್ಯವಿದೆ" id='are-slot-1' class='oiad oi-axt oiadv'> id='top-searched-articles'>ನೀವು
ಯಡಿಯೂರಪ್ಪ ಅವರ ಜೊತೆ ಅಧಿಕಾರ ನಡೆಸಿದ್ದೇ ತಪ್ಪು, ಮೈತ್ರಿ ಸರ್ಕಾರ ಮಾಡಿದ ಮೇಲೆ ಒಪ್ಪಂದದಂತೆ ಅವರಿಗೆ ಅಧಿಕಾರ ನೀಡಬೇಕಿತ್ತು. ಅದು ಬಿಡಿ, ಈಗ ಮುಗಿದು ಹೋದ ಮಾತು. ಈಗ ನೀವು ದೇಹದಂಡನೆ ಮಾಡಿ ಏನನ್ನೂ ಗಳಿಸಲು ಸಾಧ್ಯವಿಲ್ಲ. ಹೋರಾಟ ಮಾಡಲು ದೈಹಿಕವಾಗಿ, ಮಾನಸಿಕವಾಗಿ ಸಮರ್ಥರಿರಬೇಕು. ನೋಡಿ ಎಷ್ಟು ಜನ ಅಭಿಮಾನಿಗಳು ನಿಮಗಾಗಿ ಕಾದು ನಿಂತಿದ್ದಾರೆ ಎಂದು ಸೆಂಟಿಮೆಂಟಲ್ ಡೈಲಾಗ್ ಗೆ ಕರಗಿದ ಕುಮಾರ್, ಯುಆರ್ ಎ ಅವರು ನೀಡಿದ ಜ್ಯೂಸ್ ಕುಡಿದು ಪುಟಿದೆದ್ದು ನಿಂತರು[ಮುಂದುವರೆದಿದೆ...]











Click it and Unblock the Notifications