ನಂಬಿಕೆ ಇಲ್ಲದಿದ್ದರೆ ಬದುಕ್ಕಿದ್ದೂ ಸತ್ತಂತೆ; ಕುಮಾರಸ್ವಾಮಿ

ಈ ಸಂದರ್ಭದಲ್ಲಿ ಮಾತನಾಡಿದ ಎಚ್ಡಿಕೆ, ಜನರ ನಂಬಿಕೆ ಇಲ್ಲದಿದ್ದರೆ ಬದುಕಿದ್ದೂ ಸತ್ತಂತೆ. ಬಿಜೆಪಿ ಸರಕಾರ ನಮ್ಮ ಕುಟುಂಬದ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಘನತೆ ಗೌರವ ಇದ್ದರೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲಿ ಎಂದರು.
ನಮ್ಮ ಕುಟುಂಬದ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಸಾರ್ವಜನಿಕರಲ್ಲಿ ತಪ್ಪು ಕಲ್ಪನೆ ಉಂಟುಮಾಡಿದ್ದಲ್ಲದೆ, ನಮ್ಮ ಕುಟುಂಬದ ಗೌರವವನ್ನು ಹಾಳು ಮಾಡುವ ಪ್ರಯತ್ನವನ್ನು ಮಾಡಲಾಗುತ್ತಿದೆ. ಈ ಕಳಂಕದ ಹಿನ್ನೆಲೆಯಲ್ಲಿ ನಾನು ನಿರಶನ ಕೂತಿದ್ದೇನೆ ಎಂದರು. ಶನಿವಾರ ಬೆಳಗ್ಗೆ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸತ್ಯಾಗ್ರಹ ಆರಂಭಿಸಿದರು.
ತಮ್ಮ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಆರೋಪದಿಂದ ಮುಕ್ತನಾಗಲು ಈ ಸತ್ಯಾಗ್ರಹ ನಡೆಸುತ್ತಿರುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ. ವಿಧಾನಸೌಧದ ಮುಂದೆ ಅಥವಾ ಶಾಸಕರ ಭವನದ ಮುಂದಿನ ಬಸವೇಶ್ವರ ಪ್ರತಿಮೆ ಮುಂದೆ ಧರಣಿ ಸತ್ಯಾಗ್ರಹ ಹೂಡಲು ನಿರ್ಧರಿಸಿದ್ದರು. ಪೊಲೀಸರು ನಿರಾಕರಿಸಿದ ಕಾರಣ ಕಡೆಗೆ ಫ್ರೀಡಂಪಾರ್ಕ್‌ನ್ನು ಎಚ್ಡಿಕೆ ಆಯ್ಕೆ ಮಾಡಿಕೊಂಡಿದ್ದಾರೆ.












Click it and Unblock the Notifications