ಜು. 1ರಿಂದ ಮಂತ್ರಾಲಯಕ್ಕೆ ಹೊಸ ವೋಲ್ವೊ ಬಸ್

ಬೆಂಗಳೂರು - ಮಂತ್ರಾಲಯ ನಡುವೆ ಶುಕ್ರವಾರ, ಶನಿವಾರ ಮತ್ತು ಭಾನುವಾರಗಳಂದು ಹೆಚ್ಚುವರಿ ವೋಲ್ವೊ ಬಸ್ ಸಂಪರ್ಕ ಕಲ್ಪಿಸಲು ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್ ಟಿಸಿ) ನಿರ್ಧರಿಸಿದೆ. 362 ಕಿ.ಮೀ. ದೂರವನ್ನು ಸುಮಾರು 8 ಗಂಟೆ ಅವಧಿಯಲ್ಲಿ ತಲುಪಬಹುದಾಗಿದೆ.
ಜುಲೈ 1ರಿಂದ ಈ ಸೇವೆ ಆರಂಭ ವಾಗಲಿದೆ. ಬೆಂಗಳೂರಿನಿಂದ ರಾತ್ರಿ 10 ಗಂಟೆಗೆ ಹೊರಡುವ ಬಸ್, ಬೆಳಿಗ್ಗೆ 5.15ಕ್ಕೆ ಮಂತ್ರಾಲಯ ತಲುಪಲಿದೆ. ಮಧ್ಯಾಹ್ನ 2.15ಕ್ಕೆ ಮಂತ್ರಾಲಯದಿಂದ ಹೊರಟು, ರಾತ್ರಿ 9.45ಕ್ಕೆ ಬೆಂಗಳೂರು ತಲುಪಲಿದೆ ಎಂದು ಕೆಎಸ್‌ಆರ್ ಟಿಸಿ ಪ್ರಕಟಣೆ ತಿಳಿಸಿದೆ.
ನಿಗಮದ ವೆಬ್‌ಸೈಟ್ (www.ksrtc.in) ಮೂಲಕವೂ ಮುಂಚಿತವಾಗಿ ಟಿಕೆಟ್ ಕಾಯ್ದಿರಿಸಬಹುದು. ಮಾಹಿತಿಗೆ 77609 90562 ಅಥವಾ 22870099 ಸಂಖ್ಯೆಗೆ ಕರೆ ಮಾಡಬಹುದು.












Click it and Unblock the Notifications