ಕೇಂದ್ರ ಹಚ್ಚಿದ ಬೆಂಕಿಗೆ ತುಪ್ಪ ಸುರಿದ ಸಚಿವ ಅಶೋಕ

ರಾಜ್ಯ ಸರ್ಕಾರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳ ಪ್ರಯಾಣ ದರ ಶನಿವಾರ ಮಧ್ಯ ರಾತ್ರಿಯಿಂದಲೇ ಜಾರಿ ಬಂದಿದ್ದು, ಶೇ.7ರಷ್ಟು ಹೆಚ್ಚಳವಾಗಿದೆ. ಬಿಎಂಟಿಸಿ, ಕೆಎಸ್ ಆರ್ ಟಿಸಿ, ವಾಯುವ್ಯ ಸಾರಿಗೆ ಮತ್ತು ಈಶಾನ್ಯ ಸಾರಿಗೆ ಬಸ್ ಗಳ ಪ್ರಯಾಣದಲ್ಲಿ ಶೇ.5.12 ರಿಂದ ಶೇ 6.95ರಷ್ಟು ಏರಿಕೆಯಾಗಿದೆ. ವೋಲ್ವೋ ಬಸ್ ದರದಲ್ಲಿ ಶೇ 8 ರಷ್ಟು ದರ ಏರಿಕೆ ಕಂಡಿದೆ.
ಸಾಮಾನ್ಯ ಸಾರಿಗೆ ದರದಲ್ಲಿ ಶೇ 5.12, ರಾಜಹಂಸ ಬಸ್ ಪ್ರಯಾಣ ದರ ಶೇ 6.95 ಹಾಗೂ ಬಿಎಂಟಿಸಿ ದರದಲ್ಲಿ ಮೊದಲ ಹಂತ ಹೊರತುಪಡಿಸಿ ನಂತರದ ಸ್ಟೇಜ್ ಗಳಲ್ಲಿ ರು 1 ರಿಂದ 2ರಷ್ಟು ಏರಿಕೆ ಆಗಿದೆ. ಬಿಎಂಟಿಸಿ ದಿನದ ಪಾಸ್, ಮಾಸಿಕ ಬಸ್ ದರ ಕೂಡ ಹೆಚ್ಚಳ ಕೊಂಡಿದೆ.ಗುರುತಿನ ಚೀಟಿ ಇರುವ ದಿನದ ಪಾಸ್ ದರ 35 ರು.ನಿಂದ 40 ರು. ಗುರುತಿನ ಚೀಟಿ ಇಲ್ಲದ್ದು 45ರು ಹಾಗೂ ವಜ್ರ ಗೋಲ್ಡ್ ದರ 90 ರು.ಗಳಾಗಿದೆ.
| ವೇಗದೂತ | ರಾಜಹಂಸ | |||
| ಊರಿನ ಹೆಸರು | ಹಿಂದಿನ ದರ(ರೂ.ಗಳಲ್ಲಿ) | ಈಗಿನ ದರ | ಹಿಂದಿನ ದರ | ಈಗಿನ ದರ |
| ಮೈಸೂರು | 95 | 101 | 143 | 153 |
| ಮಂಗಳೂರು | 237 | 253 | 357 | 385 |
| ಹುಬ್ಬಳ್ಳಿ | 273 | 291 | 413 | 444 |
| ಮಂಡ್ಯ | 67 | 72 | 100 | 107 |
| ಧಾರವಾಡ | 284 | 304 | 431 | 464 |
| ಗುಲ್ಬರ್ಗಾ | 412 | 441 | 628 | 676 |
| ಬಳ್ಳಾರಿ | 213 | 227 | 321 | 345 |
| ದಾವಣಗೆರೆ | 182 | 193 | 271 | 292 |
| ಶಿವಮೊಗ್ಗ | 193 | 206 | 290 | 312 |
| ಬೆಳಗಾವಿ | 332 | 355 | 505 | 544 |












Click it and Unblock the Notifications