ಕಟ್ಟಾ ಜಗದೀಶ್ ಫೇಲ್, ಚೆನ್ನಿಗಪ್ಪ ಪಾಸೋ ಪಾಸ್ !

ಪ್ರಕರಣದ ತನಿಖೆ ವಿರುದ್ಧ ಇದ್ದ ತಡೆಯಾಜ್ಞೆಯನ್ನು ನ್ಯಾಯಮೂರ್ತಿ ವಿ. ಜಗನ್ನಾಥನ್ ಅವರು ಮಂಗಳವಾರ ತೆರವುಗೊಳಿಸಿದರು. ವಿವಾದಿತ ಇಟಾಸ್ಕಾ ಕಂಪನಿಗೆ ಕೆಐಎಡಿಬಿ ಮೂಲಕ 325 ಎಕರೆ ಭೂಮಿ ಮಂಜೂರು ಮಾಡಲು 87 ಕೋಟಿ ರೂ. ಲಂಚ ಪಡೆದಿರುವ ಆರೋಪ ಇದಾಗಿದೆ. ಈ ಹಿನ್ನೆಲೆಯಲ್ಲಿ ಕಳೆದ ಸೆ. 29ರಂದು ಲೋಕಾಯುಕ್ತ ಪೊಲೀಸರು ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿ ತನಿಖೆಗೆ ಮುಂದಾಗಿದ್ದರು. ಆದರೆ ತನಿಖೆಗೆ ಕೋರ್ಟ್ ಕಳೆದ ಅಕ್ಟೋಬರ್ ತಡೆ ನೀಡಿತ್ತು.
ಚೆನ್ನಿಗಪ್ಪ ವಿರುದ್ಧ ಅರ್ಜಿ ವಜಾ: ಮಾಜಿ ಸಚಿವ ಸಿ. ಚೆನ್ನಿಗಪ್ಪ ಅವರು ಸರ್ಕಾರಿ ಕೃಷಿ ಭೂಮಿಯನ್ನು ಕೃಷಿಯೇತರ ಭೂಮಿಯನ್ನಾಗಿ ಪರಿವರ್ತಿಸಿರುವುದಾಗಿ ಆರೋಪಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ಹೈಕೋರ್ಟ್ ಮಂಗಳವಾರ ವಜಾ ಮಾಡಿದೆ.
ವಿನಾಕಾರಣ ಅರ್ಜಿ ಸಲ್ಲಿಸಿದ್ದ ನೆಲಮಂಗಲದ ನಿವಾಸಿ ಎನ್. ರಾಜಣ್ಣ ಎಂಬುವವರಿಗೆ 50 ಸಾವಿರ ರುಪಾಯಿ ದಂಡ ವಿಧಿಸಿದೆ. 10 ಸಾವಿರ ವಿದ್ಯಾರ್ಥಿಗಳಿಗೆ 240 ಕೊಠಡಿ ನಿರ್ಮಿಸುವ ಉದ್ದೇಶದಿಂದ 35 ಕೋಟಿ ರು.ಗಳನ್ನು ಸಾರ್ವಜನಿಕರಿಂದ ದೇಣಿಗೆ ರೂಪದಲ್ಲಿ ವಸೂಲು ಮಾಡಲಾಗಿದೆ ಎನ್ನುವುದು ಅರ್ಜಿದಾರರ ದೂರಾಗಿತ್ತು.












Click it and Unblock the Notifications