ಆಣೆ ಮಾಡೋಕೆ ನಾನು ಹೋಗಲ್ಲ: ಎಚ್ ಡಿ ದೇವೇಗೌಡ
ಬಾಗಲಕೋಟೆ,
ಜೂ 19 : 'ಈ ಆಣೆ ಪ್ರಮಾಣ ಎಲ್ಲಾ ತಾವು ಮಾಡಿದ ಅವ್ಯವಹಾರಗಳನ್ನು ಮುಚ್ಚಿ ಹಾಕಿಕೊಳ್ಳೋಕೆ ಅಯೋಗ್ಯರು ಮಾಡಿಕೊಂಡಿರೋ. ಬಿಜೆಪಿ ಒಂದು ಪಾರ್ಟಿ ಏನ್ರಿ. ತೀಟೆಯಿದ್ದರೆ ಕುಮಾರಸ್ವಾಮಿ ಜೊತೆ ಮಾತಾಡ್ಲಿ, ಮಾಜಿ ಪ್ರಧಾನಿ ದೇವೇಗೌಡರ ಜೊತೆ ಮಾತಾಡೋ ಯೋಗ್ಯತೆ ಇದೇಯೇನ್ರಿ ಅವನಿಗೆ' ಎಂದು ದೇವೇಗೌಡರು ಗುಡುಗಿದ್ದಾರೆ. id="toptextpromo">'ಅಧಿಕಾರ
ಬೇಕಾದಾಗ ಮನೆಗೆ ಬಂದು ಕುಮಾರಸ್ವಾಮಿ ಕಾಲು ಹಿಡಿದು ಕೊಂಡಿದ್ದ. ಈಗ ಆರೋಪ ಮಾಡುತ್ತಾನೆ ನಾಚಿಕೆ ಆಗೋದಿಲ್ವ ಅವನಿಗೆ. ಹಿಂದೆ ಶೋಭಾ ಕರಂದ್ಲಾಜೆ, ರಾಮಚಂದ್ರಪ್ಪ ಬಂದಿದ್ರು ಮನೆಗೆ ಸಂಧಾನಕ್ಕೆ ಬಂದಿದ್ರು, ಸರಿಯಾಗಿ ಬೈಯ್ದು ಕಳಿಸಿದ್ದೆ. ಅನಂತ್ ಕುಮಾರ್ ಬಹಳ ಮಾತಾಡ್ತಾನೆ, ಅವನು ವೆಂಕಯ್ಯ ನಾಯ್ಡುನೂ ಅಷ್ಟೇ. ಅವರ ಪಕ್ಷದಲ್ಲಿ ಬರೀ ಹುಳುಕು ನಮ್ಮ ಬಗ್ಗೆ ಮಾತಾಡೋ ಹಕ್ಕು ಏನಿದೆ ಅವರಿಗೆ' ಎಂದು ಮಾಜಿ ಪ್ರಧಾನಿ ದೇವೇಗೌಡರು ಹೇಳಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಧರ್ಮಸ್ಥಳ
ಶ್ರೀಕ್ಷೇತ್ರದ ಬಗ್ಗೆ ಅಪಾರ ಗೌರವವಿದೆ. ದೇವರ ದರ್ಶನಕ್ಕೆ ಹೋಗುತ್ತೇನೆ ಆದರೆ, ಯಡಿಯೂರಪ್ಪ ಕರೆದಿರುವ ಪಂಥಾಹ್ವಾನವನ್ನು ತಾವು ಸ್ವೀಕರಿಸುವುದಿಲ್ಲ. ಯಾವುದೇ ಆಣೆ ಪ್ರಮಾಣಕ್ಕಾಗಿ ನಾನು ಅಲ್ಲಿಗೆ ಹೋಗುವುದಿಲ್ಲ. ಆಣೆ ಪ್ರಮಾಣ ಕುಮಾರಸ್ವಾಮಿಗೆ ಬಿಟ್ಟ ವಿಷಯ ಎಂದು ದೇವೇಗೌಡ ಸ್ಪಷ್ಟಪಡಿಸಿದ್ದಾರೆ.











Click it and Unblock the Notifications