ಸಜ್ಜನ್‌ರಾವ್ ಸರ್ಕಲ್ ಮೈಸೂರು ಸೋಪು-ಸೀರೆ ಸಂತೆ

KSDL Sandal Soap Fair
ಬೆಂಗಳೂರು, ಜೂನ್ 18: ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ (ಕೆಎಸ್‌ಡಿಎಲ್‌) ಅಪ್ಪಟ ಶ್ರೀಗಂಧ ದ್ರವ್ಯದಿಂದ ತಯಾರಿಸಿದ ನಾನಾ ನಮೂನೆಯ ಸಾಬೂನುಗಳ ಗಂಧದ ಪರಿಮಳ ಸಜ್ಜನ್‌ರಾವ್ ಸರ್ಕಲ್ ನಲ್ಲಿ ಗಾಢವಾಗಿ ಪಸರಿಸುತ್ತಿದೆ. ಬೆಂಗಳೂರಿನ ಸುಪ್ರಸಿದ್ಧ ವಿವಿ ಪುರಂ ಅಕ್ಷರಶಃ ಗಂಧಧ ನಾಡು ಆಗಿ ಮಾರ್ಪಟ್ಟಿದೆ. ಕೆಎಸ್ಐಸಿ ಸೀರೆಗಳೂ ಇದಕ್ಕೆ ಸಾಥ್ ನೀಡಿವೆ.

ಕಾರಣ ಎರಡೂ ಸರಕಾರಿ ಸಂಸ್ಥೆಗಳು ವೃತ್ತದಲ್ಲಿರುವ ಕೋಟೆ ವಿಜಯಲಕ್ಷ್ಮೀ ಕಲ್ಯಾಣ ನಿಲಯದಲ್ಲಿ ಐದು ದಿನಗಳ 'soaps and sarees fair'ಗೆ ಶುಕ್ರವಾರ ಚಾಲನೆ ನೀಡಿವೆ. ಅಪರೂಪದ ಈ ಸಂತೆಯು ಶ್ರೀಗಂಧದ ಸುವಾಸನೆಯಿಂದ ಮಾರ್ಗದಲ್ಲಿ ಸಂಚರಿಸುವ ಜನರನ್ನು ಕೈಬೀಸಿ ಕರೆಯುತ್ತಿದೆ. ಮುಖ್ಯ ವಿಷಯವೆಂದರೆ, ಎಲ್ಲ ಉತ್ಪನ್ನಗಳ ಮೇಲೂ ಶೇ. 15ರಷ್ಟು ರಿಯಾಯ್ತಿ ಕೂಡ ಇದೆ. ಹೇಗೂ ವೀಕೆಂಡ್. ಇಲ್ಲಿ ಒಂದು ಸುತ್ತು ಹಾಕಿ.

ಮೈಸೂರು ಸ್ಯಾಂಡಲ್‌ ಬ್ರ್ಯಾಂಡ್‌ನ‌ ಉತ್ಪನ್ನಗಳು ಬೆರಳೆಣಿಕೆಯಷ್ಟಿರಬಹುದು ಎಂದು ತಿಳಿದವರಿಗೆ ಇಲ್ಲಿ ಅಚ್ಚರಿ ಕಾದಿದೆ. ಸುಮಾರು 38 ಪ್ರಕಾರದ ವಿವಿಧ ಉತ್ಪನ್ನಗಳು ಪ್ರದರ್ಶನದಲ್ಲಿದ್ದು, ಸಂತೆಯಲ್ಲಿ ಅಪ್ಪಟ ಶ್ರೀಗಂಧದಿಂದ ತಯಾರಿಸಿದ ಉತ್ಪನ್ನಗಳ ಲೋಕವೇ ಅನಾವರಣಗೊಂಡಿದೆ. ಮೈಸೂರು ಸ್ಯಾಂಡಲ್‌ನ ಗಿಫ್ಟ್ ಪ್ಯಾಕ್‌, ದೂಪ್‌, ಹ್ಯಾಂಡ್‌ ವಾಶ್‌, ಅಗರಬತ್ತಿ, ಬೇಬಿ ಪೌಡರ್‌, ಬೇಬಿ ಸಾಬೂನು, ಕಾರ್ಬಲಿಕ್‌, ರೋಸ್‌ ಸ್ಯಾಂಡಲ್‌ ಆಯಿಲ್‌, ಮಡಿಲು ಕಿಟ್, ಗೋಲ್ಡ್‌ ಸಿಕ್ಸರ್‌, ಇನ್ನೂ ಮಾರುಕಟ್ಟೆಗೆ ಬಾರದ ಮಿಲೇನಿಯಂ ಸೋಪ್‌ ಪ್ರದರ್ಶನದಲ್ಲಿವೆ.

ಸೀರೆಗಳ ಆಕರ್ಷಣೆ: ಅಲ್ಲದೇ, ಸಂತೆಯಲ್ಲಿ ವಿವಿಧ ನಮೂನೆಯ ಮೈಸೂರು ಸಿಲ್ಕ್ ಸೀರೆಗಳೂ ನಾರಿಯರ ಗಮನಸೆಳೆಯುತ್ತಿವೆ. 7,400 ರಿಂದ 2.20 ಲಕ್ಷ ರೂ.ಗಳವರೆಗಿನ ಬೆಳ್ಳಿ, ಬಂಗಾರದ ಎಳೆಗಳನ್ನು ಒಳಗೊಂಡ ಝರಿ, ಸಿಲ್ಕ್ ಕ್ರೇಪ್‌, ಪ್ರಿಂಟೆಡ್‌ ಮತ್ತಿತರ ಪ್ರಕಾರದ ಸೀರೆಗಳು ಜತೆಗೆ ಸಿಲ್ಕ್ ಶರ್ಟ್‌ಗಳು ಇಲ್ಲಿ ಕಣ್ಮನ ಸೆಳೆಯುತ್ತವೆ. 'ಸೋಪ್‌ ಸಂತೆ'ಯಲ್ಲಿ ಪಾಲ್ಗೊಂಡು ಮಾತನಾಡಿದ ಕೆಎಸ್‌ಡಿಎಲ್‌ ಅಧ್ಯಕ್ಷ, ಶಾಸಕ ಶಿವಾನಂದ ನಾಯ್ಕ, ಮೈಸೂರು ಸ್ಯಾಂಡಲ್‌ ಸೋಪ್‌ ಜನರ ಸೋಪ್‌. ಆದ್ದರಿಂದ ಉತ್ಕೃಷ್ಟ ಉತ್ಪನ್ನ ಮೈಸೂರು ಸ್ಯಾಂಡಲ್‌ನ್ನು ಕಡೆಗಣಿಸಬೇಡಿ' ಎಂದು ಸೂಕ್ಷ್ಮವಾಗಿ ಹೇಳಿದರು.

ತಾಲ್ಲೂಕು ಕೇಂದ್ರಗಳಲ್ಲೂ 'ಸಂತೆ': 'ಸೋಪ್‌ ಸಂತೆ'ಯನ್ನು ಮುಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲೂ ನಡೆಸುವ ಚಿಂತನೆ ಇದೆ. ಹಳ್ಳಿಗಳಲ್ಲಿ ವಾರಕ್ಕೊಮ್ಮೆ ನಡೆಯುವ ಸಂತೆಯ ಮಾದರಿಯಲ್ಲಿಯೇ ತಾಲ್ಲೂಕು ಕೇಂದ್ರಗಳಲ್ಲಿ 'ಸೋಪ್‌ ಸಂತೆ' ನಡೆಸಲಾಗುವುದು. ಇದನ್ನು ಹಂತ ಹಂತವಾಗಿ ಎಲ್ಲ ಕಡೆ ನಡೆಸಲಾಗುವುದು ಎಂದೂ ತಿಳಿಸಿದರು.

ಶಾಸಕ ಡಾ.ಹೇಮಚಂದ್ರ ಸಾಗರ್‌, ಪಾಲಿಕೆ ಸದಸ್ಯ ಅನಿಲ್‌ಕುಮಾರ್ ಮಾತನಾಡಿದರು. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಎಂ.ಕೆ. ಬಲದೇವಕೃಷ್ಣ, ಜಿ. ರಾಮಚಂದ್ರ, ಸೌರವ್‌ ಭಾರ್ಗವ್‌, ಕೃಷ್ಣಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+