ದೇವಮಾನವನಿಗೆ 9 ಕೋಟಿ ದಂಡ ವಿಧಿಸಿದ ಸುಪ್ರೀಂಕೋರ್ಟ್

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿಎಸ್ ಚೌಹಾಣ್ ಮತ್ತು ಸ್ವತಂತರ್ ಕುಮಾರ್‌ರನ್ನೊಳಗೊಂಡ ನ್ಯಾಯಪೀಠ ಚಂದ್ರಸ್ವಾಮಿ ಮತ್ತು ಆತನ ಸಹಚರ ವಿಕ್ರಮ್ ಕುಮಾರ್ ವಿರುದ್ಧ ಆದೇಶಿಸಿದೆ. ಮೊದಲ ನಾಲ್ಕು ಪ್ರಕರಣಗಳಿಗೆ ಸಂಬಂಧಿಸಿ ರೂ. 25 ಲಕ್ಷ ಪಾವತಿಸಿ, ಇನ್ನುಳಿದ ಎಲ್ಲ ಪ್ರಕರಣಗಳಿಗೆ ದಂಡ ಪಾವತಿಸುವುದ ರಿಂದ ವಿನಾಯತಿ ನೀಡುವಂತೆ ಚಂದ್ರಸ್ವಾಮಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಆದರೆ ಮನವಿಯನ್ನು ತಿರಸ್ಕರಿಸಿರುವ ನ್ಯಾಯಪೀಠ, ಸಂಪೂಣ ದಂಡವನ್ನು ಬ್ಯಾಂಕ್ ಡ್ರಾಫ್ಟ್ ಮುಖಾಂತರ ನೀಡಬೇಕು ಎಂದು ಆದೇಶಿಸಿದೆ.
ಆತ ಹಣ ಪಾವತಿಸುತ್ತಾನೆ, ಆದರೆ ಒಂದೇ ಹಂತದಲ್ಲಿ ಸಂಪೂರ್ಣ ಮೊತ್ತವನ್ನು ಪಾವತಿಸಲು ಆದೇಶಿಸುವುದು ತುಂಬಾ ಕಷ್ಟಕರ ಮತ್ತು ಕಠಿಣ ನಿರ್ಧಾರವಾಗುತ್ತದೆ ಎಂದು ಚಂದ್ರಸ್ವಾಮಿ ಪರ ನ್ಯಾಯವಾದಿಗಳು ನ್ಯಾಯಾಲಯದಲ್ಲಿ ವಾದಿಸಿದ್ದರು. ಎಫ್‌ಇಆರ್‌ಎ ನಿಯಮಗಳ ಉಲ್ಲಂಘನೆಗೆ ಸಂಬಂಧಿಸಿದ 13 ಪ್ರಕರಣಗಳು ಚಂದ್ರಸ್ವಾಮಿಯ ವಿರುದ್ಧ ದಾಖಲಾಗಿದ್ದವು. ಈ ಎಲ್ಲ ಪ್ರಕರಣಗಳಿಗೆ ಸಂಬಂಧಿಸಿ ಆತ ರೂ. 9 ಕೋಟಿ ದಂಡ ಪಾವತಿಸುವಂತೆ ED ಆದೇಶಿಸಿತ್ತು
ಈ ಮೊದಲು ರೂ. 9 ಕೋಟಿ ದಂಡ ಪಾವತಿಸುವಂತೆ ವಿದೇಶಿ ವಿನಿಮ ಯಕ್ಕೆ ಸಂಬಂಧಿಸಿದ ಟ್ರಿಬ್ಯೂ ನಲ್ ಚಂದ್ರಸ್ವಾಮಿಗೆ ಆದೇಶಿಸಿತ್ತು. ಆದರೆ ಈ ಆದೇಶವನ್ನು ಚಂದ್ರಸ್ವಾಮಿ ದಿಲ್ಲಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ದಿಲ್ಲಿ ಹೈಕೋರ್ಟ್ ಕೂಡ ಸ್ವಾಮಿಯ ಅರ್ಜಿಯನ್ನು ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ಚಂದ್ರಸ್ವಾಮಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದನು.












Click it and Unblock the Notifications