ಅತ್ಯಾಚಾರ ಮಾಡುತ್ತಿರುವಾಗಲೇ ಇಹಲೋಕ ತ್ಯಜಿಸಿದ !

ಪಕ್ಕದ ಗ್ರಾಮದಲ್ಲಿದ್ದ ಈ ಮಹಿಳೆಯ ಮನೆಗೆ ನುಗ್ಗಿದವನೇ ಚಾಕು ತೋರಿಸಿ, ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಆದರೆ ಅತ್ಯಾಚಾರ ಮಾಡುತ್ತಾ, 'ಯಾಕೊ ಸುಸ್ತಾಗ್ತಿದೆ' ಎಂದು ಪಕ್ಕಕ್ಕೆ ಉರುಳಿದ್ದಾನೆ. ಆದರೂ ಮರಳಿ ಯತ್ನವ ಮಾಡುತ್ತಾ, ಚೆಲ್ಲಾಟಕ್ಕೆ ಇಳಿದ. ಆದರೆ ಮತ್ತೆ ಮೈಚೆಲ್ಲಿ ಬಿದ್ದವನೇ ಶಾಶ್ವತವಾಗಿ ನಿಶ್ಚೇತನಗೊಂಡ.
;ಇತ್ತ ಗಾಬರಿಗೆ ಬಿದ್ದ ಮಹಿಳೆ ಕುಡಿದು ಮೈಮರೆತಿರಬಹುದು ಎಂದು ಎಣಿಸಿದಳಾದರೂ ಅವನು ಸತ್ತಿರುವುದನ್ನು ಗಮನಿಸಿದಳು. ದಿಕ್ಕುತೋಚದೆ, ಗ್ಯಾರೇಜಿನಿಂದ ಕಾರು ತೆಗೆದವಳೇ, ಸೀದಾ ತನ್ನ ಮಗಳ ಮನೆಗೆ ಹೋಗಿ ನಡೆದುದೆಲ್ಲವನ್ನು ತಿಳಿಸಿದಳು.
ಮೃತ ಅತ್ಯಾಚಾರಿ, ಎರಡು ಮೈಲು ದೂರ ಸೈಕಲ್ಲೇರಿ ಈ ಗ್ರಾಮಕ್ಕೆ ಬಂದಿದ್ದ. ಬೇಸಿಗೆ ಕಾಲವಾದ್ದರಿಂದ ಬಳಲಿಕೆ ಜಾಸ್ತಿಯಾಗಿರಬಹುದು. ಜತೆಗೆ ಮಹಿಳೆಯ ಮನೆಯಲ್ಲಿ ಮತ್ತೂ ಬಳಲಿ ಬೆಂಡಾಗಿದ್ದ. ಬಹುಶಃ ಹೃದಯಾಘಾತ ಆಗಿರಬಹುದು ಎಂದು ಪೊಲೀಸರು ಎಣಿಸಿದ್ದಾರೆ. ಈ ವ್ಯಕ್ತಿ, 1986ರಲ್ಲಿಯೇ ಮೊದಲ ಬಾರಿಗೆ ಪೊಲೀಸರ ಅತಿಥಿಯಾಗಿದ್ದ. ಅನೇಕ ಪ್ರಕರಣಗಳಲ್ಲಿ ಜೈಲುಪಾಲಾಗಿದ್ದ ಇವ 2008 ರಲ್ಲಿ ಜೈಲಿನಿಂದ ಹೊರಬಂದಿದ್ದ.
;











Click it and Unblock the Notifications