ಲಿಂಗಾಯತರು ವೀರಶೈವಕ್ಕೆ ಸೇರ್ಪಡೆಯಾಗಬೇಕು:ಶೆಟ್ಟರ್
ಬೆಂಗಳೂರು
, ಜೂನ್ 16: ಲಿಂಗಾಯತ-ವೀರಶೈವ ಸಮಾಜ ಇಂದು ಒಂದಾಗಿ ಉಳಿದಿಲ್ಲ. ಒಡೆದು ಛಿದ್ರವಾಗಿರುವ ಪರಿಸ್ಥಿತಿಯೇ ಮುಂದುವರಿದರೆ ವೀರಶೈವ ಧರ್ಮಕ್ಕೆ ಉಳಿಗಾಲವಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಜಗದೀಶ ಶೆಟ್ಟರ್ ಆತಂಕಪಟ್ಟಿದ್ದಾರೆ. id="toptextpromo">ನಗರದ
ಕೊಳದ ಮಠದಲ್ಲಿ ಇತ್ತೀಚೆಗೆ ಶಿವಮ್ಮನವರ ಸಂಸ್ಮರಣೆ ಅಂಗವಾಗಿ ಹಮ್ಮಿಕೊಂಡಿದ್ದ ಅಖಿಲ ಕರ್ನಾಟಕ ಭಜನಾ ಕಲಾವಿದರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಉಪ ಜಾತಿಗಳಿಂದ ಸಮಾಜ ಛಿದ್ರವಾಗುತ್ತದೆ. ಹಾಗಾಗಿ, ಉಪಜಾತಿಗಳ ವೈಭವೀಕರಣ ಸಲ್ಲದು. ಎಲ್ಲವೂ ವೀರಶೈವದಲ್ಲಿ ಸಮ್ಮಿಳಿತಗೊಳ್ಳಬೇಕು. ಆಗ ಮಾತ್ರ ವೀರಶೈವ ಸಮಾಜ ಶಾಶ್ವತವಾಗಿ ನೆಲೆಯೂರಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. id='are-slot-1' class='oiad oi-axt oiadv'> id='top-searched-articles'>ಇಂದು
ಬಸವಣ್ಣನ ಜಯಂತಿ ಆಚರಣೆಗಳು ಆಗುತ್ತಿವೆ. ಆದರೆ, ಆತ ಸಾರಿದ ಸಂದೇಶಗಳನ್ನು ಪಾಲಿಸುತ್ತಿಲ್ಲ. ಬಸವಣ್ಣನ ತತ್ವಗಳನ್ನು ವೈಯಕ್ತಿಕವಾಗಿ ಪ್ರತಿಯೊಬ್ಬರೂ ಅಳವಡಿಸಿಕೊಂಡರೆ ಮಾತ್ರ ಇಡೀ ವ್ಯವಸ್ಥೆಯ ಬದಲಾವಣೆ ಸಾಧ್ಯ ಎಂದರು.











Click it and Unblock the Notifications