ಕರ್ನಾಟಕದಲ್ಲಿ ಕೋಮುಗಲಭೆ, ಪತ್ರಕರ್ತನ ಕೊಲೆ?

ಈ ಕುತೂಹಲ ಕೇವಲ ಕರ್ನಾಟಕ ಮತ್ತು ಕನ್ನಡಿಗನಿಗೆ ಮಾತ್ರ ಸೀಮಿತವಾಗಿಲ್ಲ. ದೇಶ ಕಾಲ ಸಂಸ್ಕೃತಿಗೆ ಅನುಗುಣವಾಗಿ ಪೂಜೆ ಪುನಸ್ಕಾರ, ಹೋಮ ಹವನಗಳು ನಡೆಯುತ್ತಿವೆ. ನಂಬಿಕೆಗಳಿಗೆ ಜಾತಿ, ಧರ್ಮ, ಭೌಗೋಳಿಕ ಮಿತಿ ಇಲ್ಲ ಎಂಬ ಅಂಶ ಪುನಃ ಪ್ರೂವ್ ಆಗಿದೆ.
ಚಂದ್ರಗ್ರಹಣದ ಕುರಿತಾಗಿ ನಿನ್ನೆ ಕನ್ನಡ ಟಿವಿ ವಾಹಿನಿಗಳಲ್ಲೂ ಭರಪೂರ ಚರ್ಚೆ, ವಿಮರ್ಶೆಗಳು ನಡೆದವು. ಒಂದು ವಾಹಿನಿಯಲ್ಲಿ ಒಬ್ಬ ಜ್ಯೋತಿಷಿಗಳು ಮಾತನಾಡುತ್ತಾ, ಬರಲಿರುವ ದಿನಗಳಲ್ಲಿ ಸಂಭವಿಸುವ ಕೆಲವು ವಿದ್ಯಮಾನಗಳ ಬಗೆಗೆ ಮುನ್ಸೂಚನೆ ಕೊಟ್ಟರು.
ಶತಮಾನದ ಅತ್ಯಂತ ದೀರ್ಘ ಚಂದ್ರಗ್ರಹಣದ ಪರಿಣಾಮವಾಗಿ ರಾಜ್ಯದಲ್ಲಿ ಕೋಮುಗಲಭೆ ನಡೆಯುತ್ತದಂತೆ. ಪತ್ರಕರ್ತರ ಮೇಲೆ ಹಲ್ಲೆಗಳು ನಡೆಯುತ್ತವಂತೆ. ಒಬ್ಬ ಪತ್ರಕರ್ತ ಕೊಲೆಯೂ ಆಗುತ್ತಾನೆ ಎಂದರಂತೆ. ಯಾಕೋ ಏನೋ ನಮಗೆ ಭಯವಾಗುತ್ತಿದೆ. [ಹಾಗೆ ಸುಮ್ಮನೆ 'ಗ್ರಹಣ' ಸಣ್ಣಕಥೆ ಓದಿರಿ]












Click it and Unblock the Notifications